ಹಾವೇರಿ – ಅನುಮಾನಾಸ್ಪದ ರೀತಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹ ಪತ್ತೆಯಾದ ಘಟನೆ ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮೃತರನ್ನ ಪ್ರವೀಣ ಬಾಗಿಲದ 24 ವರ್ಷ ಮತ್ತು ನೇತ್ರಾ ಬಾಳಿಕಾಯಿ 18 ವರ್ಷ ವಯಸ್ಸು ಎಂದು ಗುರುತಿಸಲಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಪ್ರೇಮಿಗಳು ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದೆ. ಮೃತದೇಹಗಳ ಬಳಿ ಬೀಯರ್ ಬಾಟಲಿ, ವಿಷದ ಬಾಟಲಿ ಮತ್ತು ಚಾಕು ಪತ್ತೆಯಾಗಿದೆ. ಅಲ್ಲದೆ ಮೃತದೇಹಗಳ ಎರಡು ನೂರು ಮೀಟರ್ ಸಮೀಪದಲ್ಲಿಯೇ ಪ್ರವೀಣ ತಂದಿದ್ದ ಬೈಕ್ ಇದೆ. ಎರಡು ಕುಟುಂಬ ಸದಸ್ಯರು ಮಕ್ಕಳನ್ನ ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಕಳೆದ ಗುರುವಾರ ಮಗಳು ಮನೆ ಬಿಟ್ಟು ಹೋಗಿದ್ದಾಳೆ. ನಾವು ಊರು – ಸಂಬಂಧಿಕರ ಮನೆಯಲ್ಲಿ ಹುಡುಕಿದ್ವಿ. ಪೊಲೀಸರಿಗೆ ದೂರು ಕೊಟ್ಟಿದ್ವೀ, ಈಗ ಮೃತದೇಹ ಪತ್ತೆಯಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಯುವಕನ ಸಂಬಂಧಿಕರು ಸಾವಿನಲ್ಲಿ ಅನುಮಾನ ಇದೆ ತನಿಖೆಯಾಗಬೇಕು ಅಂತಿದ್ದಾರೆ.ವಿಷಯ
ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗುತ್ತಲ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
More Stories
ಜನತಾ ಕರ್ಫ್ಯೂ ಪಾಲನೆ ಮಾಡಿ, ಕೋವಿಡ್ ಚಿಕಿತ್ಸೆಗೆ ನ್ಯೂನ್ಯತೆಯಾಗದಂತೆ ಮುನ್ನೆಚ್ಚರಿಕೆ: ಶಿಗ್ಗಾಂವ-ಸವಣೂರ ಆಸ್ಪತ್ರೆಗೆ ಡಿಸಿ ಭೇಟಿ ಪರಿಶೀಲನೆ..!
ಕೊರೋನಾ ಎರಡನೇಯ ಅಲೆಯ ಭಯ: ಮಾನವೀಯತೆ ಮರೆತ ಜನ, ಅನಾಥವಾಗಿ ಬಿದ್ದ ಬಿಕ್ಷುಕನ ಶವ..!
ಕೊರೋನಾ ನಿಯಮ ಬ್ರೇಕ್: 35 ಮಂದಿ ರೈತರ ಮೇಲೆ ಎಫ್.ಐ.ಆರ್.ದಾಖಲು..!