ಹಾವೇರಿ – ಪ್ರತಿವರ್ಷ ಭರತ್ ಹುಣ್ಣುಮೆ ಮರುದಿನವೇ ಹಾವೇರಿ ತಾಲ್ಲೂಕು ಹಾವನೂರು ಗ್ರಾಮದಲ್ಲಿ ಮಾಲತೇಶ ಸ್ವಾಮೀಯ ಕಾರ್ಣೀಕೊತ್ಸವ ಜರುಗುತ್ತದೆ. ಪ್ರತಿವರ್ಷ ದಂತೆ ದೈವವಾಣಿ ನುಡಿಯಲು ಗೊರವಯ್ಯ ಬಿಲ್ಲನೇರುವಾಗ ಕೆಳಗೆ ಜಾರಿದ ಘಟನೆ ನಡೆಯಿತು. ಈ ವೇಳೆ ನೆರೆದ ಭಕ್ತರಲ್ಲಿ ಒಂದು ಕ್ಷಣ ಆತಂಕ ಎದುರಾಗಿತ್ತು.
ಮಾಲತೇಶ ಸ್ವಾಮೀಯ ಆಶೀರ್ವಾದದಿಂದ ಮತ್ತೆ ಗೊರವಯ್ಯ ಹೊನ್ನಪ್ಪ. ಬಿಲ್ಲರ ಸಾವರಿಸಿಕೊಂಡು, ೧೫ ಅಡಿಯ ಬಿಲ್ಲನೇರಿ “ಸವನಿಧೀ ಆತಲೇ ಪರಾಕ್ ” ಅನ್ನುವ ದೈವವಾಣಿ ನುಡಿದಿದ್ದಾನೆ.
ಗ್ರಾಮದ ಸುತ್ತಮುತ್ತಲಿನ ಗ್ರಾಮದ ಜನರು ಹಾಗೂ ಬೇರೆ ಜಿಲ್ಲೆಯ ಸಾವಿರಾರು ಜನರು ಕಾರ್ಣೀಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಕಾರ್ಣೀಕೋತ್ಸವವು ಬಹಳ ವಿಜೃಂಭಣೆಯಿಂದ ಜರುಗಿತು.
ಪ್ರಸ್ತುತ ವರ್ಷದ ಸವನಿಧೀ ಆತಲೇ ಪರಾಕ್ ಅನ್ನುವ ದೈವವಾಣಿಯನ್ನು ಮುಂಗಾರು ಮತ್ತು ಹಿಂಗಾರಿನ ಮಳೆಗಳು ಸಮಾನವಾಗಿ ಬಂದು ಯಾವುದೇ ಸಮಸ್ಯೆ ಎದುರಾಗುವುದಿಲ್ಲ, ಕಷ್ಟ ಸುಖ ಎಲ್ಲವೂ ಸಮಾನವಾಗಿ ಇರುವವು ಎಂದು ಜನರು ಹಾಗೂ ಭಕ್ತರು ವಿಶ್ಲೇಷಣೆ ಮಾಡಿದ್ದಾರೆ.
ಕಾರ್ಣಿಕ ಹೇಳುವ ಗೊರವಯ್ಯ ಸ್ವಾಮಿಯ ದೈವವಾಣಿ ನುಡಿಯುವ ಮುನ್ನವೆ ಬಿಲ್ಲಿನಿಂದ ಕೆಳಗೆ ಜಾರಿದರು. ಇದರಿಂದ ಒಂದು ಕ್ಷಣ ಆತಂಕ ಎದುರಾಗಿದ್ದರು ಕೂಡ ಮತ್ತೆ ಬಿಲ್ಲು ಏರಿ ದೈವವಾಣಿ ನುಡಿದು, ಜನರ ಮಧ್ಯೆ ಧುಮ್ಮಿದರು. ಕೊನೆಯಲ್ಲಿ ದೈವವಾಣಿ ಕೇಳಿ ಭಕ್ತರು ಖುಷಿಯಿಂದಲೇ ಊರಿನ ಕಡೆ ಹೆಜ್ಜೆಹಾಕಿದರು.
_____
More Stories
ಜನತಾ ಕರ್ಫ್ಯೂ ಪಾಲನೆ ಮಾಡಿ, ಕೋವಿಡ್ ಚಿಕಿತ್ಸೆಗೆ ನ್ಯೂನ್ಯತೆಯಾಗದಂತೆ ಮುನ್ನೆಚ್ಚರಿಕೆ: ಶಿಗ್ಗಾಂವ-ಸವಣೂರ ಆಸ್ಪತ್ರೆಗೆ ಡಿಸಿ ಭೇಟಿ ಪರಿಶೀಲನೆ..!
ಕೊರೋನಾ ಎರಡನೇಯ ಅಲೆಯ ಭಯ: ಮಾನವೀಯತೆ ಮರೆತ ಜನ, ಅನಾಥವಾಗಿ ಬಿದ್ದ ಬಿಕ್ಷುಕನ ಶವ..!
ಕೊರೋನಾ ನಿಯಮ ಬ್ರೇಕ್: 35 ಮಂದಿ ರೈತರ ಮೇಲೆ ಎಫ್.ಐ.ಆರ್.ದಾಖಲು..!