June 22, 2021

RANEBENNURU | ರಾಣೇಬೆನ್ನೂರು ಹುಲಿಗೆ ಭಾವಪೂರ್ಣ ಶ್ರದ್ದಾಂಜಲಿ | RANEBENNURU

ಹಾವೇರಿ – ರಾಣೇಬೆನ್ನೂರು ಹುಲಿ, ರಾಜ್ಯ ಮತ್ತು ಹೊರರಾಜ್ಯದ ಹೋರಿ ಓಡಿಸುವ ಅಖಾಡದಲ್ಲಿ ಅದೊಂದು ಫೇಮಸ್ ಹೆಸರು. ಒಂದು ಕೋಟಿಗೂ ಅಧಿಕ ಹಣ ಕೊಡ್ತೀನಿ ಅಂದರು ಕೂಡ ಮಾಲೀಕ ಮಾತ್ರ ಹೋರಿ ಕೊಟ್ಟಿರ್ಲಿಲ್ಲ. ಅದರೆ ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ಹುಲಿ ಅನ್ನೋ ಹೋರಿ ಮೃತಪಟ್ಟಿತ್ತು.

ಹೋರಿಯ ಮಾಲೀಕ ದೇವ ಮರಿಯಪ್ಪ ರಾಣೇಬೆನ್ನೂರು ತಾಲ್ಲೂಕು ಗುಡ್ಡದ ಆನ್ವೇರಿ ಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರೆವೇರಿಸಿದ್ದರು. ಮೂರು ದಿನದ ನಂತರ ರಾಣೇಬೆನ್ನೂರು ಹುಲಿ ಹೋರಿಯ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಇವತ್ತು ಶ್ರದ್ಧಾಂಜಲಿ ಅರ್ಪಿಸಿದರು.

ಸಮಾಧಿ ಸ್ಥಳಕ್ಕೆ ಮಗ ಹಾಗೂ ದೇವ ಮರಿಯಪ್ಪ ಪೂಜೆ ಸಲ್ಲಿಸಿ, ಅದರ ಭಾವಚಿತ್ರ ಇಟ್ಟು ಮನುಷ್ಯರಿಗೆ ಮಾಡುವಂತೆ ಪೂಜಾ ವಿಧಿವಿಧಾನಗಳನ್ನ ಮಾಡಿದರು‌. ಅನ್ನ, ಬಾಳೆಹಣ್ಣು, ಸಿಹಿ ಹಾಗೂ ತಿನಿಸುಗಳನ್ನ ಇಟ್ಟು ನೈವೇದ್ಯ ಮಾಡಿದರು.

ಮಾಲೀಕ 10 ವರ್ಷಗಳ ಹಿಂದೆ ಹೋರಿಯೊಂದನ್ನ ಖರೀದಿ ಮಾಡಿದ್ದ. ಹೋರಿಯನ್ನ ಕೊಬ್ಬರಿ ಹೋರಿ ಓಡಿಸೋ ಅಖಾಡಕ್ಕೆ ಬಿಡುತ್ತಿದ್ದರು. ಮೊದಲ ಅಖಾಡದಿಂದಲೇ ಹೋರಿ ಸಾಕಷ್ಟು ಫೇಮಸ್ ಆಗಿತ್ತು. ಭಾಗವಹಿಸಿದಲ್ಲೆಲ್ಲಾ ಧೂಳೆಬ್ಬಿಸಿಕೊಂಡು ಯಾರ ಕೈಗೂ ಸಿಗದಂತೆ ಶರವೇಗದಲ್ಲಿ ಓಡಿ ಅಭಿಮಾನಿಗಳ ಮನಸ್ಸನ್ನು ಗೆದ್ದಿತ್ತು.‌ 25 ತೊಲೆ ಬಂಗಾರ, ಒಂದೂವರೆ ಕೆ.ಜಿ ಬೆಳ್ಳಿ, 17 ಬೈಕ್, ಪ್ರಿಡ್ಜ್, ಎತ್ತಿನ ಬಂಡಿಗಳು ಹೀಗೆ 10 ವರ್ಷದಲ್ಲಿ ನೂರಾರು ಬಹುಮಾನಗಳನ್ನ ಗೆದ್ದಿತ್ತು. ಕೆಲವು ದಿನಗಳ ಹಿಂದಷ್ಟೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಹೋರಿ ಬೆದರಿಸೋ ಹಬ್ಬದಲ್ಲಿ ಭರ್ಜರಿಯಾಗಿ ಓಡಿತ್ತು.

ಈಗ ರಾಣೇಬೆನ್ನೂರು ಹುಲಿ ನೆನಪು ಮಾತ್ರ.

Share this News
error: Content is protected !!