April 22, 2021

ಮುನಿಸಿಕೊಂಡನಾ.. ಏಳುಕೋಟಿ ‌ಮೈಲಾರ ಲಿಂಗ..? ಶ್ರೀ ಕ್ಷೇತ್ರ ಮೈಲಾರದಲ್ಲಿ ನಡೆಯಿತು ಅನಾಹುತ..!

ಹಾವೇರಿ – ಐತಿಹಾಸಿಕ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನದ ಮುಂದೆ ಇರುವ ಶಿಬಾರದ ತ್ರಿಶೂಲ ಕಳಚಿಬಿದ್ದ ಘಟನೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕು ಮೈಲಾರದಲ್ಲಿ ನಡೆದಿದೆ.

ಮೈಲಾರಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ಮಂಭಾಗದ ಶಿಬಾರ ತ್ರಿಶೂಲ ಕಳಚಿಬಿದ್ದಿದೆ. ಮುಂಜಾನೆ ಐದು ಗಂಟೆ ಸುಮಾರಿಗೆ ದೇವರ ಉತ್ಸವ ಮೂರ್ತಿಯ ಮೆರವಣಿಗೆ ಹೊರಟ್ಟಿತ್ತು. ಆಗ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದ ಕೆಲ ಹೊತ್ತು ದೇವರ ಉತ್ಸವ ನಿಂತು ಮುಂದೆ ಸಾಗಿತು.


ಜಾತ್ರೆಗೆ ಮುನ್ನವೇ ಅಪ ಶಕುನವಾಗಿದೆ. ಭಕ್ತರ ಮನದಲ್ಲಿ ಆತಂಕ ಮನೆಮಾಡಿದೆ. ದಿಢೀರನೆ ನಡೆದ ಅನಾಹುತದಿಂದ ತಲ್ಲಣಗೊಂಡಿದ್ದಾರೆ. ಶಿಬಾರದ ಕಳಸ ಭಗ್ನವಾಗುತ್ತಿದ್ದಂತೆ ಭಕ್ತರು ಬೇಸರಗೊಂಡಿದ್ದಾರೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎಸಿ ಪ್ರಕಾಶ ಭೇಟಿ ಮಾಡಿದ ಭಕ್ತರು ಮನವಿ ಮಾಡಿದ್ದಾರೆ.
ಇದು ನಡೆದಿರುವುದು ಅಪಶಕುನ, ಹಿಂದಿನ ಪದ್ದತಿಯಂತೆ ಮೈಲಾರ ಕಾರ್ಣೀಕೋತ್ಸವ ಮಾಡಲು ಅವಕಾಶ ಮಾಡಿ ಕೋಡಬೇಕಿತ್ತು. ಸಂಪ್ರದಾಯದ ಪ್ರಕಾರ ಕಳಸ ಪ್ರತಿಷ್ಠಾಪನೆ ಮಾಡಿ ಎಂದು ಒತ್ತಾಯ ಮಾಡಿದರು.

ಏಳುಕೋಟಿ ಭಕ್ತರೆಂದರೆ ಮೈಲಾರಲಿಂಗನಿಗೆ ಎಲ್ಲಿಲ್ಲದ ಪ್ರೇಮ. ಪ್ರತಿವರ್ಷ ವೂ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಯಲ್ಲಿ ಏರುಮುಖವಾಗುತ್ತಿತ್ತು. ಆದರೆ ಈ ವರ್ಷ ಕೋರನಾ ಹಾವಳಿಯ ನೆಪವೊಡ್ಡಿ ಹೊರಗಿನ ಭಕ್ತರಿಗೆ ಜಾತ್ರೆ ನಿಷೇಧವನ್ನು ಹೇರಲಾಗಿದೆ. ಆದ್ದರಿಂದ ಭಕ್ತರಿಲ್ಲದ ಜಾತ್ರೆ ಆಚರಣೆಗೆ ಮುನಿಸಿಕೊಂಡನಾ ಭಂಡಾರದ ಒಡೆಯ? ಜನರನ್ನ ಜಾತ್ರೆಗೆ ನಿರ್ಭಂದ ಮಾಡಿದ್ದಕ್ಕೆ ಈ ಅಪಶಕುನ ನಡೆದಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!