July 25, 2021

ಗುತ್ತಲದಲ್ಲಿ ಜುವೆಲ್ಲರಿ ಶಾಪ್ ಕಳ್ಳತನ. ಕಳ್ಳರ ಕರಾಮತ್ತು ಸಿಸಿ‌ ಕ್ಯಾಮರಾದಲ್ಲಿ ಸೆರೆ

ಹಾವೇರಿ- ಗುತ್ತಲದ ರಾಣೇಬೆನ್ನೂರ ರಸ್ತೆಯಲ್ಲಿರುವ ಜುವೆಲ್ಲರಿ ಶಾಪವೊಂದಕ್ಕೆ ಕಳ್ಳರು ಹಿಂಬದಿಯಿಂದ ನುಗ್ಗಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ರಾಣೇಬೆನ್ನೂರ ರಸ್ತೆಯಲ್ಲಿನ ಶಂಕರ ಚಿನ್ನಮ್ಮನವರ ಎಂಬುವರ ತರಳಬಾಳು ಜುವೆಲ್ಲರಿ ಶಾಪ್ ಗೆ ಸೋಮವಾರ ನಸುಕಿನ ಜಾವ 3.30 ರ ಸುಮಾರಿಗೆ ಇಬ್ಬರು ಯುವಕರು ಅಂಗಡಿಯ ಹಿಂಬದಿಯ ಗೋಡೆಯನ್ನು ಒಡೆದು ಒಳ ನುಗ್ಗಿ ಕಳ್ಳತನ ಮಾಡಿದ್ದಾರೆ.


ಬಂಗಾರದ ಆಭರಣಗಳು ಲಾಕರ್ ನಲ್ಲಿ ಇರುವದರಿಂದ ಸುಮಾರು 3-4 ಕೆಜಿಯ ಬೆಳ್ಳಿಯ ಆಭರಣಗಳು ಮಾತ್ರ ಕಳ್ಳತನವಾಗಿವೆ. ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಇಬ್ಬರು ಕಳ್ಳರ ಚಿತ್ರಣ ಸೆರೆಯಾಗಿವೆ.

ಘಟನೆ ಕುರಿತಂತೆ ಸ್ಥಳಕ್ಕೆ ಗುತ್ತಲ ಠಾಣೆಯ ಪಿಎಸ್ಐ ಎಂ.ಈ ಮಣ್ಣಣ್ಣನವರ, ಎಚ್ ಎಫ್ ಪೂಜಾರ, ಪಿ. ವಿ ವಡೇರಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this News
error: Content is protected !!