July 25, 2021

ಮುತ್ತಿನ ರಾಶಿ ಮೂರು ಪಾಲು ಆದಿತಲೇ ಪರಾಕ್..!

ಐತಿಹಾಸಿಕ ಸುಕ್ಷೇತ್ರ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕು ಮೈಲಾರದ ಮೈಲಾರಲಿಂಗೇಶ್ವರ ಜಾತ್ರೆಯ ವರ್ಷದ ಕಾರ್ಣೀಕೋತ್ಸವ ನಡೆಯಿತು.
ಮುತ್ತಿನರಾಶಿ ಮೂರು ಪಾಲು ಆದಿತಲೆ ಪರಾಕ್ ಎಂದು ಗೊರವಯ್ಯ ಸ್ವಾಮಿ ಡೆಂಕನಮರಡಿಯಲ್ಲಿ ಬಿಲ್ಲನ್ನೇರಿ ಕಾರ್ಣಿಕವಾಣಿ ನುಡಿದಿದ್ದಾನೆ‌.
15 ಅಡಿ ಎತ್ತರದ ಬಿಲ್ಲನೇರಿದ ಗೊರವಯ್ಯ ಸ್ವಾಮೀ ಬಿಲ್ಲನೇರಿ ಸದ್ದಲೇ ಅನ್ನುತ್ತಾ ಈ ವರ್ಷದ ಭವಿಷ್ಯವಾಣಿ “ಮುತ್ತಿನರಾಶಿ ಮೂರು ಪಾಲು ಆದಿತಲೆ ಪರಾಕ್” ಎಂದು ದೈವವಾಣಿ ನುಡಿದಿದ್ದಾನೆ. ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಧರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣೀಕವನ್ನ ವಿಶ್ಲೇಷಿಸಿದ್ದಾರೆ.
ಮೂರು ಭಾಗದಲ್ಲಿ ಮಳೆ ಬೆಳೆ ಸಮೃದ್ಧಿಯಾಗಿ, ಒಂದು ಭಾಗದಲ್ಲಿ ಸ್ವಲ್ಪ ಸಮಸ್ಯೆ ಆಗಲಿದೆ. ಇನ್ನು ರಾಜಕೀಯವಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರ ಛಿದ್ರ ಛಿದ್ರ ಆಗಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬರೋ ಮುನ್ಸೂಚನೆ ಇದೆ ಎಂದು ಕಾರ್ಣಿಕವಾಣಿಯನ್ನ ವಿಶ್ಲೇಷಣೆ ಮಾಡಿದರು.
ಇನ್ನು ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯಕ್ ರಾಜ್ಯದಲ್ಲಿ ರಾಜಕೀಯವಾಗಿ ಮೂರು ಭಾಗ ಆಗುವ ಸಾದ್ಯತೆ ಇದೆ. ಯಡಿಯೂರಪ್ಪ ಒಂದು ಭಾಗ, ಯತ್ನಾಳ ಇನ್ನೊಂದು. ಇನ್ನೂ ಬಿಜೆಪಿ ಹೋದವರು ಒಂದು ಭಾಗವಾಗಿ ಛಿದ್ರ ಛಿದ್ರವಾಗಲಿದೆ ಎಂದು ವಿಶ್ಲೇಷಣೆ ಮಾಡಿದರು‌.‌

ಕೊರೋನಾ ನಿರ್ಭಂಧ ಇರೋದಕ್ಕೆ ಭಕ್ತರ ಸಂಖ್ಯೆ ಸ್ವಲ್ಪ ಇಳಿಮುಖವಾಗಿತ್ತು. ವರ್ಷ ಭವಿಷ್ಯವಾಣಿ ಕೇಳಿದ ಭಕ್ತರು ತಮ್ಮ ಊರಿಗೆ ಹೆಜ್ಜೆ ಹಾಕಿದರು.

Share this News
error: Content is protected !!