April 22, 2021

ನಿರಂತರ ಅಧ್ಯಯನದಿಂದ‌ ಮಾತ್ರ ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಸಾಧ್ಯ-ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ

ಹಾವೇರಿ: ವಿದ್ಯಾರ್ಥಿಗಳು ನಿರಂತರ ಅಧ್ಯಯನ ಶೀಲರಾದಾಗ ಪರೀಕ್ಷೆ ಯಲ್ಲಿ ಯಶಸ್ಸು ಗಳಿಸಲು ಸುಲಭವಾಗುವುದು ಎಂದು ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ನೆಗಳೂರ ಗ್ರಾಮದ ಹಿರೇಮಠದಲ್ಲಿ ಸೋಮವಾರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಗಳಿಗೆ ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ ತರಗತಿ ಪರೀಕ್ಷೆ ಎಂಬುದು ಮಹತ್ವದ ಘಟ್ಟವಾಗಿದ್ದು ಅದನ್ನು ಯಶಸ್ವಿಯಾಗಿ ನಿರ್ವಹಿಸಿದರೆ ಮುಂದಿನ ಶೈಕ್ಷಣಿಕ ಜೀವನ ಸುಲಭವಾಗಲಿ ಎಂಬ ಉದ್ದೇಶದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಬ್ಬಿಣ ಕಡಲೆ ಎನಿಸುವ ವಿಷಯಗಳಾದ ಇಂಗ್ಲಿಷ್ ವಿಜ್ಞಾನ ಗಣಿತ ಗಳಾಗಿವೆ ಅವುಗಳ ಮೇಲೆ ಗ್ರಾಮೀಣ ವಿದ್ಯಾರ್ಥಿಗಳು ಹಿಡಿತ ಸಾಧಿಸುವಂತಾಗಲಿ ಎಂದು ಶ್ರೀ ಮಠದ ವತಿಯಿಂದ 21 ದಿನಗಳ ಕಾಲ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಪರೀಕ್ಷೆ ಯಲ್ಲಿ ಯಶಸ್ವಿ ಗಳಿಸಿ ಎಂದರು.

ಶಿಕ್ಷಕ ವಿ.ಎಮ್.ಗಡ್ಡದೇವರಮಠ ಮಾತನಾಡಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೂರಕವಾದ ಕಾರ್ಯಗಾರವನ್ನು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದೆ. ಜಿಲ್ಲಾ ಸಂಪನ್ಮೂಲ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಷಯ ಭೋಧನೆ ಜೊತೆಗೆ ಪರೀಕ್ಷಾ ತಯಾರಿಯ ಬಗ್ಗೆ ಮಾರ್ಗ ದರ್ಶನ ನೀಡುವರು ಎಂದರು.
ನೆಲಗೋಲ್ ಸರಕಾರಿ ಪ್ರೌಢಶಾಲಾ ಇಂಗ್ಲಿಷ್ ಭಾಷಾ ಶಿಕ್ಷಕ ಎಫ್.ಬಿ.ಮರಡೂರ ಇಂಗ್ಲಿಷ್ ವಿಷಯದ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ.ಸಿ ಪಾಟೀಲ್ ಆರ್.ಎಪ್. ತೌಡೂರ ಎಸ್.ಎಮ್. ಬಶಟ್ಟಿ ವಿ.ಎಮ್.ಪ್ರಸಾದಿಮಠ ಎಸ್.ವಿ.ಫಕ್ಕೀರಸ್ವಾಮಿ ಎಂ.ಪಿ.ಗೌಡಣ್ಣನವರ ಇತರರಿದ್ದರು. ಗುರುಶಾಂತ ಹಿರೇಮಠ ನಿರೂಪಿಸಿದರು ಯಲ್ಲರೆಡ್ಡಿ ಕೆಂಚರೆಡ್ಡರ ವಂದಿಸಿದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!