April 22, 2021

ಕೊರೋನಾ ಲಸಿಕೆ ಪಡೆದ ನಂತರ ಕೃಷಿ ಸಚಿವ ಬಿ.ಸಿ.ಪಾಟೀಲ ಏನು‌ ಹೇಳಿದ್ರು ಗೊತ್ತಾ..?

ಹಾವೇರಿ ಮಾರ್ಚ್.2: ಕೃಷಿ ಸಚಿವರು ಆಗಿರುವ ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಮತ ಕ್ಷೇತ್ರ ಹಿರೇಕೆರೂರಿನ ಸ್ವಗೃಹದಲ್ಲಿ ಸರ್ಕಾರಿ ವೈದ್ಯರಿಂದ ಕೊರೋನಾ ಲಸಿಕೆ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಕೊರೋನಾ ಲಸಿಜೆ ಪಡೆಯಲು ಹಿಂದೇಟು ಹಾಕುವುದು ಸರಿಯಲ್ಲ. ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು,ಇದರತ್ತ ಯಾರೂ ಗಮನ ನೀಡಬಾರದು.

ಕರ್ನಾಟಕ ಸರ್ಕಾರ ಜನರ ಸುರಕ್ಷತೆಯಿಂದ ಕೊರೊನಾ ಲಸಿಕೆ ನೀಡುತ್ತಿದೆ‌. ಅದರಲ್ಲಿಯೂ ಪ್ರಧಾನಿ ನರೇಂದ್ರ‌ ಮೋದಿ ಕೊರೋನಾ ಲಸಿಕೆಯನ್ನು ಸರ್ಕಾರಿ ವೈದ್ಯರಿಂದ ಪಡೆದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

ನಮ್ಮ ಭಾರತದಲ್ಲಿಯೇ ತಯಾರಿಸಿದ ಕೊರೋನಾ ಲಸಿಕೆಗೆ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಕೊರೋನಾ ಸಂಘರ್ಷದ ಸಮಯದಲ್ಲಿ ಕರ್ನಾಟಕ ಹಾಗೂ ಭಾರತ ಸರ್ಕಾರ ಜನರೊಂದಿಗೆ ನಿಂತು ಅವರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿದೆ. ವೈದ್ಯರು ಲಸಿಕೆಗೆ ನೀಡಿದ ಬಳಿಕ‌ ಹೇಳಿದ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಸಾಕು ಯಾವುದೇ ಭಯವಿಲ್ಲ. ನಿರ್ಭೀತಿಯಿಂದ ಕೊರೋನಾ ಲಸಿಕೆ ಪಡೆಯಬೇಕೆಂದು ಬಿಸಿಪಿ ಕರೆ ನೀಡಿದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!