April 22, 2021

ನಿಲ್ದಾಣದಲ್ಲಿಯೇ ಬಸ್ ಅಡ್ಡಗಟ್ಟಿದ ವಿಧ್ಯಾರ್ಥಿಗಳು.. ಕಾರಣವೇನು..!?

ಹಾವೇರಿ- ಸರಿಯಾದ ಸಮಯಕ್ಕೆ ಬಸ್‌ಗಳನ್ನು ಬಿಡುವಂತೆ ಆಗ್ರಹಿಸಿ ನೂರಾರು ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಸಾರಿಗೆ ಸಂಸ್ಥೆಯ ಬಸ್ ಗಳನ್ನು ‌ ಬಸ್ ನಿಲ್ದಾಣ ದಲ್ಲಿ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಿರತ ವಿದ್ಯಾರ್ಥಿ ಮಲ್ಲಿಕಾರ್ಜುನ ಸಪ್ಪಣ್ಣನವರ ಮಾತನಾಡಿ ಲಕ್ಷ್ಮೇಶ್ವರ ಗುತ್ತಲ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಸರಿಯಾದ ಸಮಯಕ್ಕೆ ಬಾರದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹಾವೇರಿ ವಿಭಾಗದಿಂದ ಕೋಡಬಾಳ ಬೆಳವಿಗಿ ಮಾರ್ಗವಾಗಿ ಹೋಗುವ ಬಸ್ಸನ್ನು ನೆಗಳೂರ ಮಾರ್ಗವಾಗಿ ಚಲಿಸವಂತೆ ಹಾಗೂ ಲಕ್ಷ್ಮೇಶ್ವರ ವಿಭಾಗ ದಿಂದ ಬೆಳಗ್ಗೆ 9ಕ್ಕೆ ರಾಣೇಬೆನ್ನೂರ ಕಡೆಗೆ ಹೊರಡುವಂತಾಗಬೇಕು ಎಂಬಹುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಪ್ರದೀಪ ಮಠಪತಿ ಭರಮಜ್ಜ ಹಳ್ಳಾಕಾರ ಮಾಲತೇಶ ಶಿರನಹಳ್ಳಿ ರವಿ ಗಂಗನಗೌಡ್ರ ಜ್ಯೋತಿ ಹಾವೇರಿ ಸೌಜನ್ಯ ಬಿಷ್ಡನಗೌಡ್ರ ನೇತ್ರಾ ಬಡಿಗೇರ ಸೇರಿದಂತೆ ಗ್ರಾಮದ ಗ್ರಾ.ಪಂ‌ ಅಧ್ಯಕ್ಷ ಸುರೇಶ ಸಪ್ಪಣ್ಣನವರ ರುದ್ರಗೌಡ ರೋಡ್ಡಗೌಡ್ರ ಸುರೇಶರೆಡ್ಡಿ ಹಾವರೆಡ್ಡರ ಸಂಜಯ ಗಾಂಧಿ ಸಂಜೀವಣ್ಣನವರ ಶಿವಕುಮಾರ ಬೇವಿನಮರದ ಲೋಕೇಶ ಕುಬಸದ ರವಿಚಂದ್ರ ಬಾಲಣ್ಣನವರ ಕಾಂತೇಶರೆಡ್ಡಿ ಶಟ್ಟೆಪ್ಪನವರ ಭಾಗವಹಿಸಿದ್ದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!