ಹಿರೇಕೆರೂರು: ತಾನು ಪ್ರೀತಿಸಿದ ಹುಡುಗಿ ಬೇರೊಬ್ಬ ಯುವಕನನ್ನು ಪ್ರೀತಿಸಿ ಆತನ ಜೊತೆಗೆ ಓಡಿ ಹೋಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಬಸವರಾಜಪ್ಪ ಉಪ್ಪಾರ ಎಂಬುವರ ಶುಂಠಿ ತೋಟದಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಕೇರಳ ಮೂಲದ ಲಾಲು ಎ.ಕೆ(22)ಎಂದು ಗುರುತಿಸಲಾಗಿದೆ. ಮೃತ ಲಾಲು, ತನ್ನ ಗ್ರಾಮದ ಪಕ್ಕದ ಊರಿನ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ಕೆಲವು ದಿನಗಳ ಹಿಂದೆ ಪ್ರೀತಿಸಿದ ಹುಡುಗಿ ಬೇರೊಬ್ಬ ಯುವಕನನ್ನು ಪ್ರೀತಿಸಿ, ಆತನ ಜೊತೆಗೆ ಓಡಿ ಹೋಗಿದ್ದಾಳೆ.
ಪ್ರೀತಿಸಿದ ಹುಡುಗಿ ಓಡಿ ಹೋದ ವಿಷಯ ತಿಳಿದು ಮನನೊಂದ ಯುವಕ ಲಾಲು, ಹುಡುಗಿಯ ಚಿಂತೆಯಲ್ಲಿ ತಾನು ಕೆಲಸ ಮಾಡುತ್ತಿದ್ದ ಶುಂಠಿ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
_____
More Stories
ರಸ್ತೆಯಲ್ಲಿ ಗೋಳಾಡುತ್ತಿರುವ ರೈತರನ್ನು ಕಂಡು ಕಾರು ನಿಲ್ಲಿಸಿದ ಎಮ್.ಪಿ.ರೇಣುಕಾಚಾರ್ಯ: ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..!?
ಕೊರೋನಾ ಲಸಿಕೆ ಪಡೆದ ನಂತರ ಕೃಷಿ ಸಚಿವ ಬಿ.ಸಿ.ಪಾಟೀಲ ಏನು ಹೇಳಿದ್ರು ಗೊತ್ತಾ..?
ಗುತ್ತಲದಲ್ಲಿ ಜುವೆಲ್ಲರಿ ಶಾಪ್ ಕಳ್ಳತನ. ಕಳ್ಳರ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆ