April 22, 2021

ಸಚಿವ ಬಿ.ಸಿ.ಪಾಟೀಲ ಮನೆಯಲ್ಲಿ ಕೊರೋನಾ ಲಸಿಕೆ ಪ್ರಕರಣ – ತಾಲೂಕು ವೈದ್ಯಾಧಿಕಾರಿಗೆ ನೋಟಿಸ್..!

ಹಾವೇರು – ಸಚಿವ ಬಿ.ಸಿ.ಪಾಟೀಲ ಮನೆಗೆ ಹೋಗಿ ಲಸಿಕೆ ಹಾಕಿದ ಪ್ರಕರಣಕ್ಕೆ ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿಗೆ ಕಾರಣ ಕೇಳಿ‌ ನೊಟೀಸನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ನೀಡಿದ್ದಾರೆ.

ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಡಾ.ಝಡ್.ಆರ್.ಮಕಾಂದಾರಗೆ ಕಾರಣ ಕೇಳಿ ನೊಟೀಸ್ ನೀಡಿದ್ದಾರೆ. ನೋಟೀಸ್ ನಲ್ಲಿ ಕೊವೀಡ್ ೧೯ ಲಸಿಕಾಕರಣ ಸೇಷನ್ ಬಿಟ್ಟು ಹೊರಗೆ ಲಸಿಕಾಕರಣ ಮಾಡಿರುವುದು ಮಾಧ್ಯಮಗಳಿಂದ ತಿಳಿದು ಬಂದಿದೆ.‌
ಈ ವಿಷಯವಾಗಿ ೨೪ ಗಂಟೆಯೊಳಗೆ ಘಟನೆ ಮತ್ತು ಸ್ಪಷ್ಟೀಕರಣ ನೀಡಲು ಆದೇಶ ಮಾಡಿದೆ.ಇಲ್ಲಾವಾದರೆ ‌ನಿಮ್ಮ ಮೇಲೆ ಶಿಸ್ತುಕ್ರಮ ಕೈಗೊಳ್ಳಾಗುತ್ತದೆ ಎಂದು ನೋಟೀಸ್ ನೀಡಿದ್ದಾರೆ .

ಇವತ್ತು ಬೆಳಿಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ ನಿವಾಸದಲ್ಲಿ ಸಚಿವ ಪಾಟೀಲ ಮತ್ತು ಅವರ ಪತ್ನಿ ವನಜಾ ಪಾಟೀಲಗೆ ಲಸಿಕೆ ನೀಡಲಾಗಿತ್ತು. ಈ ಕುರಿತಾಗಿ ಮಾಧ್ಯಮ ಗಳಲ್ಲಿ ಸುದ್ದಿ ಪ್ರಕಟವಾಗದ್ದವು. ಈಗ ಟಿ.ಎಚ್.ಓ ಗೆ ನೋಟೀಸ್ ನೀಡುವ ಮುಖಾಂತರ ಪ್ರಕರಣಕ್ಕೆ ತೆರೆ ಎಳೆಯಲಾಗಿದೆ.

 

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!