ಹಾವೇರಿ- ಸಚಿವ ರಮೇಶ ಜಾರಕಿಹೊಳಿ
ಮಾನ ಮರ್ಯಾದೆ ಇದ್ರೆ ಮೊದಲು ರಾಜೀನಾಮೆ ಕೊಡಬೇಕು.ಸಿಎಂ ಯಡಿಯೂರಪ್ಪ ಇದನ್ನೆಲ್ಲ ಹೆಂಗೆ ಸಹಿಸಿಕೊಂಡಿದ್ದಾರೋ ಗೊತ್ತಿಲ್ಲ ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಕಿಡಿಕಾರಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು ಎಲ್ಲ ಕಚ್ಚೆ ಹರುಕರು, ಬಾಯಿ ಹರುಕರು, ಕೈ ಸರಿಯಿಲ್ಲದವರು, ಮನಸ್ಸು ಸರಿ ಇಲ್ಲದವರು ಇವರನ್ನೆಲ್ಲ ಗುಡ್ಡೆ ಹಾಕ್ಕೊಂಡು ಹೆಂಗೆ ಮುಖ್ಯಮಂತ್ರಿ ಕೆಲಸ ಮಾಡ್ತಾರೋ ಅರ್ಥ ಆಗ್ತಿಲ್ಲ. ಯಾವಾಗಲೂ ಇದನ್ನೆಲ್ಲ ಕ್ಷಮಿಸ್ತಾ ಹೋಗಬಾರದು.
ಅವನೂ ಬೇಕು, ಮೂರು ಬಿಟ್ಟವನು ಬೇಕು, ಮರ್ಯಾದೆ ಬಿಟ್ಟವನು ಬೇಕು, ಎಲ್ಲಾರು ಇದ್ದರೆ ರಾಜಕಾರಣ ಅನ್ನೋದು ಸರಿಯಾದ ದಾರಿಯಿಲ್ಲ. ಇದು ಯಾವುದು ನಮಗೆ ಆದರ್ಶವಲ್ಲ. ಯಾವುದು ಸರಿಯಿಲ್ವೋ ಅದನ್ನ ರಿಜೆಕ್ಟ್ ಮಾಡೋ ಕೆಲಸ ಮಾನ್ಯ ಮುಖ್ಯಮಂತ್ರಿ ಮಾಡಬೇಕು. ಅವರು ಮಾಡದೆ ಇದ್ದರೆ ಜನರು ತೀರ್ಮಾನ ತಗೋತಾರೆ.
ಇದರ ಮೇಲೆ ನಮ್ಮ ಬೊಮ್ಮಾಯಿ ಸಾಹೆಬ್ರು ಏನಾದ್ರೂ ಅವರದು ಐಪಿಸಿ, ಸಿಆರ್ ಪಿಸಿ ಏನಾದ್ರೂ ಕೆಲಸ ಮಾಡುತ್ತಾ ನೋಡೋಣ. ಇಂಥವರಿಗೆಲ್ಲ ಕಾನೂನು ಅಪ್ಲೈ ಆಗೋದಿಲ್ಲ. ಯಾರೋ ಬಡವರಿಗೆ ಮಾತ್ರ ಐಪಿಸಿ, ಸಿಆರ್ ಪಿಸಿ ಬಳಕೆ ಮಾಡ್ತಾರೆ ಇವರು ಸರಕಾರ ಎಂದು ಕಿಡಿಕಾರಿದರು.
_______
More Stories
ಜನತಾ ಕರ್ಫ್ಯೂ ಪಾಲನೆ ಮಾಡಿ, ಕೋವಿಡ್ ಚಿಕಿತ್ಸೆಗೆ ನ್ಯೂನ್ಯತೆಯಾಗದಂತೆ ಮುನ್ನೆಚ್ಚರಿಕೆ: ಶಿಗ್ಗಾಂವ-ಸವಣೂರ ಆಸ್ಪತ್ರೆಗೆ ಡಿಸಿ ಭೇಟಿ ಪರಿಶೀಲನೆ..!
ಕೊರೋನಾ ಎರಡನೇಯ ಅಲೆಯ ಭಯ: ಮಾನವೀಯತೆ ಮರೆತ ಜನ, ಅನಾಥವಾಗಿ ಬಿದ್ದ ಬಿಕ್ಷುಕನ ಶವ..!
ಕೊರೋನಾ ನಿಯಮ ಬ್ರೇಕ್: 35 ಮಂದಿ ರೈತರ ಮೇಲೆ ಎಫ್.ಐ.ಆರ್.ದಾಖಲು..!