April 22, 2021

ತವರು ಮನೆಗೆ ಬಂದಿದ್ದ ಅಜ್ಜಿಗೆ, ಯಮನ ರೂಪದಲ್ಲಿ ಕಾಡಿದ ಮನೆಯ ಮೇಲ್ಚಾವಣಿ.

ಮನೆಯ ಮೇಲ್ಚಾಚವಣಿ ಕುಸಿದು ವೃದ್ಧೆಯೊಬ್ಬಳು ಸಾವಿಗೀಡಾದ ಘಟನೆ ತಾಲೂಕಿನ ನೆಗಳೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಮರೋಳ ಗ್ರಾಮದ ಶಿವಗಂಗಮ್ಮ ಶಿವನಗೌಡ ಸುಟಮನಿ (70ವರ್ಷ) ಕಳೆದ 20 ದಿನಗಳ ಹಿಂದೆ ನೆಗಳೂರ ಗ್ರಾಮದ ಬಸವರಾಜ ಕಡಕೋಳ ಇವರ ಮನೆಗೆ ಬಂದಿದ್ದಳು. ತವರು ಮನೆಗೆ ಬಂದಿದ್ದ ಶಿವಗಂಗಮ್ಮ ಅಜ್ಜಿ ಶುಕ್ರವಾರ ಸಂಜೆ ಮನೆಯ ಕಟ್ಟೆಯ ಮೇಲೆ ಕುಳಿತಾಗ ಮನೆಯ ಮೇಲ್ಚಾವಣೆ ಕುಸಿದು ಈ ದುರ್ಘಟನೆ ಸಂಭವಿಸಿದೆ.

ವೃದ್ದೆಯನ್ನು ಮೊದಲು ಗುತ್ತಲ ದ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಣೇಬೆನ್ನೂರ ನಂದಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಆದರೆ ಚಿಕಿತ್ಸೆ ಫಲಿಸದೆ ಇಂದು ಅಜ್ಜಿ ಸಾವನ್ನಪ್ಪಿದ್ದಾರೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!