July 25, 2021

ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತರುವುದಕ್ಕಾಗಿ ಹನಿಟ್ರ್ಯಾಪ್ ನಡೆದಿರುವ ಸಾಧ್ಯತೆ, ಎಲ್ಲ ಅಯಾಮಗಳಿಂದ ತನಿಖೆ. -ಬಸವರಾಜ್ ಬೊಮ್ಮಾಯಿ

ಹಾವೇರಿ- ರಮೇಶ ಜಾರಕಿಹೊಳಿ ಪ್ರಕರಣ ಆದಮೇಲೆ ಬಹಳ‌ಷ್ಟು ಊಹಾಪೋಹಗಳು, ಸಂಶಯಾಸ್ಪದ ಷಡ್ಯಂತ್ರಗಳು, ಪೂರ್ವಭಾವಿ ಹನಿಟ್ರ್ಯಾಪ ಸೇರಿದಂತೆ ಬಹಳಷ್ಟು ವಿಚಾರಗಳು ಬಂದಿವೆ. ಹೀಗಾಗಿ ಕೆಲವು ಸಚಿವರು, ಶಾಸಕರಾಗಲಿ ಅವರ ತೇಜೋವಧೆ ಆಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಸವಿವರು ನ್ಯಾಯಾಂಗದ ರಕ್ಷಣೆ ಕೋರಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ತೇಜೋವಧೆ, ವಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವಂಥದ್ದು ಮತ್ತು ರಾಜಕೀಯವಾಗಿ ಅಸ್ಥಿರತೆಯನ್ನು ರಾಜ್ಯದಲ್ಲಿ ಮಾಡಬೇಕು ಅನ್ನುವ ಹಿನ್ನೆಲೆ ಕಂಡು ಕೆಲವರು ನ್ಯಾಯಾಂಗದ ರಕ್ಷಣೆ ಕೋರಿದ್ದಾರೆ.

ಅಲ್ಲದೆ ರಮೇಶ ಜಾರಕಿಹೊಳಿ ಮೇಲೆ ದೂರು ಬಂದಿದೆ. ಅದರ ಆಧಾರದ‌ ಮೇಲೆ ತನಿಖೆ ನಡಿಯುತ್ತಿದೆ. ದೂರು ಕೊಟ್ಟವರು ಮಾಹಿತಿ ಕೊಡಬೇಕಾಗಿತ್ತು, ಆ ಮಹಿಳೆ ಬಂದು ಹೇಳಿಕೆ ಕೊಡಬೇಕಾಗಿತ್ತು ಇದುವರೆಗೆ ಕೊಟ್ಟಿಲ್ಲ. ಇಂತಹ ಕೇಸ್‌ಗಳಲ್ಲಿ ಮುಂದೆ ಬಂದು ದೂರು ಕೊಡವುದೆ ಇರುವುದು, ಹೇಳಿಕೆ ಕೊಡವುದೆ ಇರುವುದು ನಡೆದ ಸಂದರ್ಭದಲ್ಲಿ ಷಡ್ಯಂತ್ರ ಸೇರಿದಂತೆ ಎಲ್ಲ ಸಂಶಯಗಳಿಗೆ ಕಾರಣವಾಗುತ್ತವೆ.

ಹೀಗಾಗಿ ಕೆಲವರು ಕಾನೂನಿನ ರಕ್ಷಣೆ ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸರು ಸಹ ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದರು.

____

Share this News
error: Content is protected !!