July 25, 2021

ಓಡಿ ಹೋಗಿ ಮದ್ವೆ ಆಗುತ್ತಿದ್ದ ಪ್ರೇಮಿಗಳಿಗೆ ಆಶೀರ್ವದಿಸಿದ ಎಮ್.ಪಿ.ರೇಣುಕಾಚಾರ್ಯ: ಪೋಷಕರು ಏನಂದ್ರು ಗೊತ್ತಾ…?

ದಾವಣಗೆರೆ – ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾದ ಲವ್ ಬರ್ಡ್ಸ್ ಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅಕ್ಷತೆ ಹಾಕಿ ಹಾರೈಸಿದ್ದಾರೆ.

ಅವರಿಬ್ಬರೂ ಪರಸ್ಪರ ಪ್ರೀತಿಸಿದ್ದರು, ಮದುವೆ ಆಗಬೇಕು ಅಂತಾ ಏನೇಲ್ಲಾ ಕಸರತ್ತು ನಡೆಸಿದ್ದರು. ಆ ಎರಡು ಜೀವಗಳು ಸಹಾಯಕ್ಕಾಗಿ ಕಾದಿದ್ದವು. ಕೊನೆಗೆ ದಾರಿ ತೋಚದೆ ಇದ್ದಾಗ ಮನೆಯವರ ವಿರೋಧದ ನಡುವೆ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದರು. ಪ್ರೇಮಿಗಳ ಪ್ರೀತಿಯನ್ನರಿತ ಸಿ.ಎಂ‌.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾರೈಸಿ,‌ ಯುವ ಜೋಡಿಗಳ ಪೋಷಕರನ್ನು ಮನವೊಲಿಸಲು ಮುಂದಾದ ಘಟನೆ ದಾವಣಗೆರೆ ಜಿಲ್ಲೆ ಹೊನ್ನಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.

ರೇಣುಕಾಚಾರ್ಯ ಹಿತೈಷಿಗಳ ಮಕ್ಕಳಾದ ಭೂಮಿಕಾ ಮತ್ತು ಶಿವಕುಮಾರ ಪ್ರೀತಿಸಿ ಕುಟುಂಬ ಸದಸ್ಯರ ವಿರೋಧದ ನಡುವೆ ಮದುವೆಯಾಗಿದ್ದಾರೆ.

ರೇಣುಕಾಚಾರ್ಯ ಮದುವೆಯಾದ ಪ್ರೇಮಿಗಳಿಗೆ ಅಕ್ಷತೆಯನ್ನ ಹಾಕಿ ಹಾರೈಸಿದರು. ನಂತರ ಯುವತಿ ತಂದೆ ತಾಯಿ ಹಾಗೂ ಕುಟುಂಬ ಸದಸ್ಯರನ್ನ ಬಿಟ್ಟು ನಿನ್ನ ಜೊತೆಗೆ ಬಂದಿದ್ದಾಳೆ. ನೀನು ಅಷ್ಟೇ ಅಮ್ಮಾ ಅವರ ಕುಟುಂಬ ಸದಸ್ಯರನ್ನ ಚೆನ್ನಾಗಿ ನೋಡಿಕೊಳ್ಳಬೇಕು. ಹೆದರಬೇಡಿ ಧೈರ್ಯದಿಂದ ಜೀವನ ಮಾಡಿ ಎಂದು ಹುಡುಗಿಗೆ ಬುದ್ದಿವಾದ ಹೇಳಿದರು.

ಯುವತಿಯ ತಂದೆಗೆ ಪೋನ್ ಮಾಡಿ ಮಗಳು ಮತ್ತು ಅಳಿಯ ಮನೆಗೆ ಬರುತ್ತಿದ್ದಾರೆ. ಅವರಿಗೆ ಆರ್ಶಿವಾದ ಮಾಡಿ ಎಂದು ದೂರವಾಣಿಯಲ್ಲಿ ಪೋಷಕರಿಗೆ ಮಾತನಾಡಿ ಮನವೊಲಿಸಲು ಮುಂದಾದರು. ಮನೆಗೆ ಹೋಗಿ ಆರ್ಶಿವಾದ ತೆಗೆದುಕೊಂಡು ಚೆನ್ನಾಗಿ ಬಾಳಿ ಬದುಕಿ ಎಂದು ಹಾರೈಸಿದರು.

Share this News
error: Content is protected !!