April 22, 2021

ಮನವಿ ಕೊಟ್ಟ‌ ಒಂದೇ ದಿನಕ್ಕೆ ಊರಿಗೆ ಬಂತು ಬಸ್.! ಖುಷಿಯಲ್ಲಿದ್ದ ಗ್ರಾಮಸ್ಥರು ಏನು ಮಾಡಿದ್ರು ಗೊತ್ತಾ..?

ಹಾನಗಲ್- ತಾಲೂಕಿನ ಹಿರೇಕೌಂಶಿ ಗ್ರಾಮದಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಲಾ-ಕಾಲೇಜುಗಳಿಗೆ ಹಾಗು ವಿವಿಧ ಗ್ರಾಮಗಳಿಗೆ ಹೋಗಬೇಕಾದರೆ ಪ್ರತಿನಿತ್ಯ ಎರಡು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗಿತ್ತು.

ಗೊಂದಿ ಕ್ರಾಸಿನ ಬಸ್ ನಿಲ್ದಾಣದಿಂದ ಮಕರವಳ್ಳಿ-ಆನವಟ್ಟಿ-ಹಾನಗಲ್ ನ ಶಾಲಾ-ಕಾಲೇಜುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲಾಗದೆ ತೊಂದರೆಯನ್ನು ಅನುಭವಿಸುತ್ತಿದ್ದರು.

ವಿದ್ಯಾರ್ಥಿಗಳು ಅನುಭವಿಸುತ್ತಿರುವ ಬಸ್ ಸಮಸ್ಯೆ ಬಗ್ಗೆ ಪೋಷಕರು ಗ್ರಾಮ ಪಂಚಾಯಿತಿ ಸದಸ್ಯ ಪತ್ರಕರ್ತ ಸಂಕನಗೌಡ ಎಂ.ಡಿ ಅವರಿಗೆ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದ್ದರು. ಇಂದು ಮಕರವಳ್ಳಿ ಶಾಲಾ ಶಿಕ್ಷಕರ ಸಲಹೆ ಪಡೆದುಕೊಂಡು ಹಾನಗಲ್ ಕೆ.ಎಸ್.ಆರ್.ಟ.ಸಿ. ಡಿಪೋ ಮ್ಯಾನೇಜರ್ ಬಳಿ ಹಿರೇಕೌಂಶಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ ಸಲ್ಲಿಸಲಾಯಿತು.

ಮನವಿಗೆ ಸ್ಪಂದಿಸಿದ ಮ್ಯಾನೇಜರ್ ಕೂಡಲೇ ಹಿರೇಕೌಂಶಿ ಗ್ರಾಮಕ್ಕೆ ಇಂದಿನಿಂದಲೇ ಬಸ್ಸು ಹೋಗುವಂತೆ ಸಿಬ್ಬಂದಿಗಳಿಗೆ ಆದೇಶಿಸಿದರು. ಹೀಗಾಗಿ ಇಂದು ಸಂಜೆ ಹಿರೇಕೌಂಶಿ ಗ್ರಾಮಕ್ಕೆ ಬಸ್ಸು ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ಸಿಗೆ ಪೂಜೆ ಸಲ್ಲಿಸಿ ಚಾಲಕ ಹಾಗೂ ನಿರ್ವಾಹಕರಿಗೆ ಸನ್ಮಾನಿಸಿ ಸ್ವಾಗತ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಂಕನಗೌಡ ಎಂ.ಡಿ ಹಾಗೂ ಗ್ರಾಮದ ಹಿರಿಯರು ವಿದ್ಯಾರ್ಥಿಗಳು ಹಾಜರಿದ್ದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!