March 7, 2021

HAVERI | ಬರೋದು ಒಂದೇ ಬಸ್, ಬಿಟ್ರೇ ಕ್ಲಾಸ್ ಮಿಸ್.. ಯಾರಿಗೆ ಹೇಳೊಣ ನಮ್ ಪ್ರಾಬ್ಲಮ್ಮು..!?

ಬಂದ ಒಂದೇ ಒಂದು ಬಸ್ ಗೆ ವಿದ್ಯಾರ್ಥಿಗಳು ಮಾಡಿದ್ದೇನು..!?
______
ಹಾವೇರಿ – ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಲಭ್ಯ ಇಲ್ಲದೆ ತುಂಬಿದ ಬಸ್ ನ ಕಿಟಕಿಯ ಹಿಡಿದುಕೊಂಡು ಪ್ರಯಾಣ ಮಾಡಿದ ಘಟನೆ ಹಾವೇರಿ ತಾಲ್ಲೂಕು ಗಾಂಧಿಪುರ ಗ್ರಾಮದ ಬಳಿ ಇರೋ ಪ್ರಥಮ ದರ್ಜೆ ಕಾಲೇಜು ಬಳಿ ನಡೆದಿದೆ.

ಇದನ್ನೂ ಓದಿ  ಮುತ್ತಿನ ರಾಶಿ ಮೂರು ಪಾಲು ಆದಿತಲೇ ಪರಾಕ್..!


ಹಾವೇರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಥಮ ದರ್ಜೆ ಕಾಲೇಜು ಹಾವೇರಿ ನಗರದಿಂದ ಐದು ಕಿಲೋ ಮೀಟರ್ ದೂರ ಇದೆ.

ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಬಂದ ಬಸಗಳಿಗೆ ಕುರಿಗಳು ನುಗ್ಗುವಂತೆ ನುಗ್ಗಿ , ಬಸಿನ ಬಾಗಿಲು ಬಳಿ‌ ಇರೋ ಕಿಟಕಿಯನ್ನ ಹಿಡಿದುಕೊಂಡು ಪ್ರಯಾಣ ಮಾಡೋ ಪರಸ್ಥಿತಿ ಬಂದಿದೆ. ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಹೆಚ್ಚುವರಿ ಬಸ್ ಬಿಡುವ ವ್ಯವಸ್ಥೆ ಮಾಡಬೇಕು.

ಇದನ್ನೂ ಓದಿ  HIREKERURU |ಪ್ರೀತ್ಸೆ.. ಪ್ರೀತ್ಸೆ.. ಅಂತಾ ಪ್ರಾಣ ತಿಂದ್ಲು, ಬೇರೊಬ್ಬನ ಜೊತೆ ಓಡಿ ಹೋದ್ಲು.. |HIREKERURU

ಇಲ್ಲಾದರೆ ವಿದ್ಯಾರ್ಥಿಗಳ ಜೀವ ಕಳೆದುಕೊಳ್ಳುವ ಪರಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಬಸ್ ವ್ಯವಸ್ಥೆ ಇಲ್ಲದಕ್ಕೆ ಮಕ್ಕಳು ನಿಲ್ಲಲು ಜಾಗೆ ಇಲ್ಲದಿದ್ದರೂ ಬಸ್ ದ್ವಾರ ಬಳಿ ನಿಂತು ಊರಿನಿಂದ ಕಾಲೇಜುಗೆ ಬರುವುದು ಮತ್ತು ಹೋಗುವುದು‌ ಮಾಡುತ್ತಿದ್ದಾರೆ.ಇನ್ನಾದರು ಜಿಲ್ಲಾಡಳಿತ ಹಾಗೂ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹೆಚ್ಚವರಿ ಬಸ್ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ .

ಇದನ್ನೂ ಓದಿ  ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಮುಖ್ಯ ಪ್ರೊ. ದೀಪಕ ಕೊಲ್ಲಾಪುರೆ

 

___

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!