July 25, 2021

ರಸ್ತೆಯಲ್ಲಿ ಗೋಳಾಡುತ್ತಿರುವ ರೈತರನ್ನು ಕಂಡು ಕಾರು ನಿಲ್ಲಿಸಿ‌ದ ಎಮ್.ಪಿ.ರೇಣುಕಾಚಾರ್ಯ: ಅಷ್ಟಕ್ಕೂ ಅಲ್ಲಿ‌ ನಡೆದಿದ್ದೇನು..!?

ದಾವಣಗೆರೆ – ಹೋರಿ ಬೆದರಿಸುವ ಸ್ಪರ್ದೆಗೆ ಕರೆದೊಯ್ಯುತ್ತಿದ್ದ ಹೋರಿಯೊಂದು ಸಾವನ್ನಪ್ಪಿದ್ದು, ಅದೇ ದಾರಿಯಲ್ಲಿ ಸಾಗುತ್ತಿದ್ದ ಹೊನ್ನಾಳಿ ಶಾಸಕ ಎಮ್.ಪಿ.ರೇಣುಕಾಚಾರ್ಯ ಕಾರನ್ನು ನಿಲ್ಲಿಸಿ ಹೋರಿ ಮಾಲೀಕರಿಗೆ ಸಾಂತ್ವನ ಹೇಳಿ, ಆರ್ಥಿಕ ಸಹಾಯ ಮಾಡಿದ ಘಟನೆ ನಡೆದಿದೆ.

ಉತ್ತರ ಕರ್ನಾಟಕ ಸೇರಿದಂತೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಓಡಿಸುವ ಸ್ವರ್ದೆ ಬಹಳ ಫೇಮಸ್. ತಿಂಗಳು ಗಟ್ಟಲೆ ತಾಲೀಮು ನಡೆಸಿ ಹೋರಿಗಳನ್ನು ತಯಾರಿ ಮಾಡಿರುತ್ತಾರೆ. ಅಂತಹ ಹೋರಿ ಸಾವನ್ನಪ್ಪಿದರೆ ಮಗನಂತೆ ಸಾಕಿದ ಮಾಲೀಕರಿಗೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಅಂತಹ ಘಟನೆ ಇವತ್ತು ದಾವಣಗೆರೆ ಜಿಲ್ಲೆ ಹೊನ್ನಳ್ಳಿ ತಾಲ್ಲೂಕು ಕಡದಕಟ್ಟೆ ಗ್ರಾಮದಲ್ಲಿ‌ ನಡೆದಿದೆ. ಶಿಕಾರಿಪುರದ ಭ್ರಾಂತೇಶ ಎಂಬ ಹೋರಿ ರಸ್ತೆಯ ಮಧ್ಯೆ ದುರಂತ ಸಾವು ಕಂಡಿದೆ.

ಹೋರಿ ಬೆದರಿಸುವ ಸ್ವರ್ದೆಯಲ್ಲಿ ಭಾವಹಿಸಿ ಹೆಸರುವಾಸಿಯಾಗಿದ್ದ ಭ್ರಾಂತೇಶ ಎಂಬ ಹೋರಿ ರಸ್ತೆ ದುರಂತದಲ್ಲಿ ಸಾವನ್ನಪ್ಪಿದೆ. ಹೋರಿಯ ಮಾಲೀಕರು ನಡು ರಸ್ತೆಯಲ್ಲಿಯೇ ಪ್ರೀತಿಯಿಂದ ಸಾಕಿದ ಹೋರಿಯನ್ನು ತಬ್ಬಿಕೊಂಡು ಗೋಗರೆಯುವ ದೃಶ್ಯ ಎಂತಹವರನ್ನು ಕರಳು ಚುರ್ರ್ ಅನಿಸುವಂತಿತ್ತು. ಭ್ರಾಂತೇಶ ಹೋರಿಯ ಮಾಲೀಕರು ಮತ್ತು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಸಿ.ಎಂ. ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಾರು ನಿಲ್ಲಿಸಿ, ಇಳಿದು ಬಂದು ಹೋರಿಯ ಮಾಲೀಕನಿಗೆ ಸಾಂತ್ವನ ಹೇಳಿದರು. ಕಣ್ಣೀರು ಹಾಕುತ್ತಿದ್ದ ಹೋರಿಯ ಅಭಿಮಾನಿಗಳಿಗೆ ದೈರ್ಯ ತುಂಬಿದರು.

ಇದೇ ವೇಳೆ ಎಮ್.ಪಿ.ರೇಣುಕಾಚಾರ್ಯ ಸ್ಥಳೀಯರ ಜೊತೆ ಸೇರಿ ಅರ್ಥಿಕ ಸಹಾಯ ಮಾಡಿದರು. ಶಿಕಾರಿಪುರದ ಭ್ರಾಂತೇಶ ಹೋರಿ ಇನ್ನು ನೆನಪು ಮಾತ್ರ. ರಸ್ತೆಯ ಮಧ್ಯೆಯಲ್ಲಿ ಹೋರಿಯ ಮಾಲೀಕರ ಅರಣ್ಯರೋಧನ ನೋಡುಗರ ಕರಳು ಕಿತ್ತು ಬರುವಂತೆ ಇತ್ತು.

Share this News
error: Content is protected !!