July 25, 2021

ಭಗವಂತನನ್ನು ಸಾಕ್ಷತ್ಕಾರ ಮಾಡಿಕೊಳ್ಳವ ಸಾಧನವೇ ಲಿಂಗದೀಕ್ಷೆ – ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ

ಹಾವೇರಿ : ಭಗವಂತನನ್ನು ಸಾಕ್ಷತ್ಕಾರ ಮಾಡಿಕೊಳ್ಳವ ಸಾಧನವೇ ಲಿಂಗದೀಕ್ಷೆಯಾಗಿದೆ ಎಂದು ನೆಗಳೂರ ವ, ಹಿರೇಮುಗದೂರ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದ ಗುರುಶಾಂತೇಶ್ವರ ಹಿರೇಮಠದಲ್ಲಿ ಲಿಂ.ಶಿವಾನಂದ ಶಿವಾಚಾರ್ಯರ 13 ನೇವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ತ ರವಿವಾರ ಜರುಗಿದ ಜಂಗಮ ವಟುಗಳಿಗೆ ಅಯ್ಯಚಾರ ಹಾಗೂ ಭಕ್ತರಿಗೆ ಶಿವದೀಕ್ಷೆ ಸಂಸ್ಕಾರವನ್ನು ನೀಡಿ ಆಶೀರ್ವಚನ ನೀಡಿದರು.
ವೀರಶೈವ ಧರ್ಮ ಪರಂಪರೆಯಲ್ಲಿ ಸನಾತನ ಕಾಲದಿಂದಲೂ ಲಿಂಗದೀಕ್ಷೆಗೆ ತನ್ನದೆಯಾದ ಮಹತ್ವ ನೀಡಲಾಗಿದೆ. ಲಿಂಗದೀಕ್ಷೆಯನ್ನು ಪಡೆಯಲು ಯಾವುದೇ ಜಾತಿ ಮತ ಬೇಧವಿಲ್ಲದೆ ದೀಕ್ಷೆ ಪಡೆದು ಲಿಂಗ ಪೂಜಾನುಷ್ಠಾನ ಮಾಡಬಹುದು. ದೀಕ್ಷೆ ಎಂಬುವ ಪದಕ್ಕೆ ತನ್ನದೇಯಾದ ಮಹತ್ವವಿದೆ. ದೀ ಎಂದರೇ ದಿಯತೇ ಶಿವಜ್ಞಾನಂ ಕ್ಷೀಯತೆ ಪಾಶ ಬಂಧನಂ ಎಂದರ್ಥ.

ಲಿಂಗದೀಕ್ಷೆಯಿಂದ ಶಿವಜ್ಞಾನ ಲಭಿಸಿ ಪಾಶ ಬಂಧನಗಳು ಮರೆಯಾಗುವವು. ವೀರಶೈವ ಧರ್ಮದಲ್ಲಿ ಉಳಿದ ಧರ್ಮ ಗಳಂತೆ ಕಠಿಣ ನಿಯಮಗಳಿಲ್ಲ ಸರಳ ಹಾಗೂ ಸುಂದರವಾಗಿ ಆಚರಿಸಿದರೆ ಭಗವಂತನ ಒಲಿಮೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ಸುಮಾರು 16 ಜಂಗಮ ವಟುಗಳಿಗೆ ಅಯ್ಯಾಚಾರ 4 ಜನರಿಗೆ ಲಿಂಗದೀಕ್ಷೆಯ ಸಂಸ್ಕಾರ ನೀಡಿದರು. ಇದಕ್ಕೂ ಪೂರ್ವದಲ್ಲಿ ಬೆಳಗಿನ ಜಾವ ಶ್ರೀಮಠದಲ್ಲಿ ಸುರಗಿ ಸಮಾರಾಧನೆ ಗಂಗಾ ಗಣಪತಿ ಪಂಚಕಳಸ ಗದ್ದುಗೆಗೆ ರುದ್ರಾಭಿಷೇಕ ಶ್ರೀಗಳ ಇಷ್ಟಲಿಂಗ ಪೂಜೆ ಜರುಗಿತು.

 

ಹಿರೇಮುಗದೂರ ಶಿವಪುತ್ರಯ್ಯ ಶಾಸ್ತ್ರಿಗಳು ಜಲ್ಲಾಪುರದ ಗುರುಮಹಾಂತಯ್ಯ ಶಾಸ್ತ್ರಿಗಳು ನೆಗಳೂರಿನ ಜಗದ್ಗುರು ಪಂಚಾಚಾರ್ಯ ವೇದ ಪಾಠಶಾಲಾ ವಿದ್ಯಾರ್ಥಿಗಳ ವೈದಿಕತ್ವದಲ್ಲಿ ಪೂಜಾ ವಿಧಿವಿಧಾನಗಳು ಜರುಗಿದವು. ಹಿರೇಮುಗದೂರ ಕಲಕೋಟಿ ನೀರಲಗಿ ಹಾವೇರಿ ಕರ್ಜಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸಿದ್ದರು.

Share this News
error: Content is protected !!