July 25, 2021

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಹಾವೇರಿ ಸೈಕ್ಲಿಂಗ್ ಕ್ಲಬ್ ವತಿಯಿಂದ ವಿಶೇಷವಾಗಿ ಆಚರಣೆ

ಹಾವೇರಿ- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಾವೇರಿ ಸೈಕ್ಲಿಂಗ್ ಕ್ಲಬ್ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.
ಇಂದು ನಗರದ ಪ್ರವಾಸಿ ಮಂದಿರದಿಂದ ಸೈಕಲ್ ಜಾಥಾ ನಡೆಯಿತು. ನಲವತ್ತು ಕಿಮೀ ಸೈಕಲ್ ತುಳಿಯುವದರ ಮೂಲಕ ಮಹಿಳಾ ದಿನಾಚರಣೆಗೆ ಹಲವು ಮಹಿಳೆಯರು, ಯುವಕ,ಯುವತಿಯರು ಸಾಕ್ಷಿಯಾದರು.

ಹಾವೇರಿ ಸೈಕ್ಲಿಂಗ್ ಕ್ಲಬ್ ಚೇರಮನ್ ರಾಮಮೊಹನರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ ವೈಶಾಲಿ ಪಂಡಿತ ಹಸಿರು ನಿಶಾನೆ ತೊರಿಸಿದರು. ಡಾ ಆಶಾ ಮಲ್ಲಾಡದ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆಯರು ಕೆಲಸದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲಸದಲ್ಲಿ ಮಹಿಳೆಯರು ಲಿಂಗ ಸಮಾನತೆಯತ್ತ ಮುಂದುವರಿಯುತ್ತಿರುವುದನ್ನು ಖಚಿತಪಡಿಸಿಕೊಳ್ಳಲು, ಅಂತಹ ಕೆಲಸದ ವಾತಾವರಣವನ್ನು ಸೃಷ್ಟಿಸುವುದು ಅತ್ಯಗತ್ಯ ಎಂದರು.

 

ಪ್ರವಾಸಿಮಂದಿರದಿಂದ ಜೀವನರಕ್ಷಾ ಪೋಲಿಸ್ ಠಾಣೆ ವರೆಗು ಜಾಥಾ ನಡೆಯಿತು. ಜಾಥಾದಲ್ಲಿ ವಾಣಿ, ಭಗವತಿ, ವರ್ಷಾ ಕಾಮತ,ರಕ್ಷಿತಾ ಬಸೆಗಣ್ಣಿ, ನಯನ ,ಶ್ವೇತಾ ಗುಂಜಟ್ಟಿ, ಕುಮಾರಿ ಐರಾ, ಡಾ ಶೃವಣ ಪಂಡಿತ, ಪ್ರಶಾಂತ ದೊಡ್ಡಮನಿ, ಗಿರಿಶ ಮಲ್ಲಾಡದ, ಮಲ್ಲಿಕಾರ್ಜುನ ಗಾಣಿಗೇರ, ಮಂಜುನಾಥ ಪಾಮೆನಹಳ್ಳಿ, ಶ್ರೀನಿವಾಸ ತೆಲ್ಕರ್, ಸಂಜಯ ಗುಂಜಟ್ಟಿ, ರಹತ ಹಳ್ಳಪ್ಪನವರ, ಮದುಕರ, ಎನ್ ಆರ್ ಪಾಟೀಲ್, ಪ್ರಸನ್ ದಾರವಾಡಕರ್,ಅರವಿಂದ,ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಗುರಿ ಮುಟ್ಟಿದರು.

Share this News
error: Content is protected !!