July 25, 2021

ಅರ್ಥಪೂರ್ಣ ಮಹಿಳಾ ದಿನಾಚರಣೆ: ಪೇಪರ್‌ ಕಪ್‌ ತ್ಯಜಿಸಲು ʻಕನಸಿನ ರಾಣೇಬೆನ್ನೂರುʼ ಕರೆ

ರಾಣೇಬೆನ್ನೂರು: ಸಮಾಜಸೇವೆ ಮತ್ತು ಜನಜಾಗೃತಿಗೆ ಹೆಸರಾಗಿರುವ ʻಕನಸಿನ ರಾಣೇಬೆನ್ನೂರುʼ ತಂಡದ ಸದಸ್ಯರು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

ರಾಣೇಬೆನ್ನೂರಿನ ದುರ್ಗಾ ತರಕಾರಿ ಮಾರುಕಟ್ಟೆ, ಹೂವು ಮತ್ತು ಹಣ್ಣಿನ ಮಾರುಕಟ್ಟೆಗಳಲ್ಲಿ ʻಪೇಪರ್‌ ಕಪ್‌ ತ್ಯಜಿಸಿ, ಸ್ಟೀಲ್‌ ಕಪ್‌ನಲ್ಲೇ ಚಹಾ ಸೇವಿಸಿʼ ಎಂಬ ಅಭಿಯಾನ ನಡೆಸಲಾಯಿತು. ಮಹಿಳಾ ಸದಸ್ಯರ ನೇತೃತ್ವದಲ್ಲಿ ಸುಮಾರು 20 ಸದಸ್ಯರು ಈ ಅಭಿಯಾನದಲ್ಲಿ ಭಾಗವಹಿಸಿದ್ದು, 400 ಸ್ಟೀಲ್‌ ಕಪ್‌ಗಳನ್ನು ಉಚಿತವಾಗಿ ವಿತರಿಸಿದರು. ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಪರಿಸರದ ರಕ್ಷಣೆಗಾಗಿ ಯಾವುದೇ ಕಾರಣಕ್ಕೂ ಪೇಪರ್‌ ಕಪ್‌ಗಳನ್ನು ಬಳಸದಂತೆ ಮಾರುಕಟ್ಟೆಯಲ್ಲಿದ್ದ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ಬಳಿ ಮನವಿ ಮಾಡಿದರು.

 

 

ಪೇಪರ್‌ ಕಪ್‌ ಏಕೆ ಬೇಡ?
ʻಕನಸಿನ ರಾಣೇಬೆನ್ನೂರುʼ ತಂಡದ ಸದಸ್ಯರು ಪೇಪರ್‌ ಕಪ್ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಜನರೆದುರು ಎಳೆಎಳೆಯಾಗಿ ತೆರೆದಿಟ್ಟರು.
– ಚಹಾವನ್ನು ಪೇಪರ್‌ ಕಪ್‌ನಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಚಹಾದ ಬಿಸಿಗೆ ಪೇಪರ್‌ ಮೇಲಿರುವ ಪ್ಲಾಸ್ಟಿಕ್‌ ಕರಗಿ ದೇಹ ಸೇರುವುದರಿಂದ ಕ್ಯಾನ್ಸರ್‌ ಸಂಭವಿಸಬಹುದು.
– ಪೇಪರ್‌ ಕಪ್‌ಗಳು ಮರುಬಳಕೆಗೆ ಬಾರದಿರುವುದರಿಂದ, ಉಪಯೋಗಿಸಿದ ನಂತರ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ.
– ಪೇಪರ್‌ ಕಪ್‌ಗಳನ್ನು ತಯಾರಿಸಲು ಮರಗಳನ್ನು ಕಡಿಯಬೇಕಾಗುತ್ತದೆ. ಅರಣ್ಯನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಜಾಗತಿಕ ತಾಪಮಾನ ಏರಿಕೆಯಂತಹ ವಿಪತ್ತುಗಳನ್ನು ಎದುರಿಸಬೇಕಾಗುತ್ತದೆ.

Share this News
error: Content is protected !!