July 25, 2021

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ೫ ನೇ ವಾರ್ಷಿಕ ಘಟಿಕೋತ್ಸವ: 19 ಸಂಶೋಧಕರಿಗೆ ಡಾಕ್ಟರೇಟ್ ಪದವಿ ಪ್ರಧಾನ

ಹಾವೇರಿ- ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕು ಗೊಟಗೋಡಿಯ ಬಳಿ ಇರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ೫ ನೇ ವಾರ್ಷಿಕ ಘಟಿಕೋತ್ಸವ ನಡೆಯಿತು‌. ಜಾನಪದ ವಿಶ್ವವಿದ್ಯಾಲಯದ ಹಿರೇತಿಟ್ಟು ರಂಗಮಂದಿರದಲ್ಲಿ ನಡೆದ ಘಟಿಕೋತ್ಸವನ್ನ ಕುಲಪತಿ ಪ್ರೋ.ಡಿ.ಬಿ.ನಾಯಕ ಉದ್ಘಾಟನೆ ಮಾಡಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಚಿಕ್ಕಮಗಳೂರು ಜಿಲ್ಲೆ, ಅಜ್ಜಂಪುರ ತಾಲೂಕು, ಸೊಲ್ಲಾಪುರ ಮಾಳೇನಹಳ್ಳಿ ಗ್ರಾಮದ ವೀರಗಾಸೆ ಹಿರಿಯ ಕಲಾವಿದರಾದ ಎಂ.ಆರ್.ಬಸಪ್ಪಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು. ರಾಷ್ಟ್ರೀಯ ಅಂತರಾಷ್ಟ್ರೀಯ, ನಾಡಿನ ಹಲವೆಡೆ ತಮ್ಮ ವೀರಗಾಸೆ ಪ್ರದರ್ಶನ ಮಾಡಿದ್ದಾರೆ. ಅಲ್ಲದೆ ಕನ್ನಡ ನಾಡು ಇಂತಹ ಕಲಾವಿದರ ಸಾರ್ಥಕ ಸೇವೆಗೆ ಹಲವು ಪ್ರಶಸ್ತಿಗಳು ಗೌರವಗಳು ಬಂದಿವೆ.

ಘಟಿಕೋತ್ಸವದಲ್ಲಿ 19 ಸಂಶೋಧಕರಿಗೆ ಡಾಕ್ಟರೇಟ್ ಪದವಿ ನೀಡಲಾಯಿತು.59 ಎಂ.ಎ ಪದವಿ, 39 ಎಂಬಿಎ ಸ್ನಾತಕೋತ್ತರ ಪದವಿ ,476 ಪಿಜಿ ಡಿಪ್ಲೊಮಾ ವಿದ್ಯಾರ್ಥಿಗಳು ಹಾಗೂ 196 ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

ಕಳೆದ ವರ್ಷದ 2018-19 ನೇ ಸಾಲಿನ ಜಾನಪದ ಸಾಹಿತ್ಯ ಸ್ನಾತಕೋತ್ತರ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನವನ್ನ ಹುಸೇನ್ ಸಾಬ್ ಪಿ ಪಡೆದುಕೊಂಡಿದ್ದಾರೆ.2017-18 ನೇ ಸಾಲಿನ ಜಾನಪದ ಸಾಹಿತ್ಯ ಸ್ನಾತಕೋತ್ತರ ವಿಭಾಗದಲ್ಲಿ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನ ರೂಪ ಮುಡೆರ ಪಡೆದುಕೊಂಡಿದ್ಧಾರೆ.

ಘಟಿಕೋತ್ಸವದಲ್ಲಿ ಕುಲಸಚಿವರು, ಶೈಕ್ಷಣಿಕ ಪರಿಷತ್ ಸದಸ್ಯರು ಹಾಗೂ ಸಿಂಡಿಕೇಟ್ ಸದಸ್ಯರು ಹಾಗೂ ಜಾನಪದ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this News
error: Content is protected !!