ಮಂಡ್ಯ – ವಾಹನ ದಾಖಲಾತಿ ತಪಾಸಣೆ ವೇಳೆ ಯುವತಿಯೊಬ್ಬಳು ರಂಪಾಟ ಮಾಡಿ ಪಿಎಸ್ಐ ಕೈಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ಮಂಡ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸವಿತಾಗೌಡ ಪಾಟೀಲ್ ಕಪಾಳ ಮೋಕ್ಷ ಮಾಡಿದ ಪಿಎಸ್ಐ ಆಗಿದ್ದಾರೆ. ಮಂಡ್ಯದ ಮಹಿಳಾ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಪೊಲೀಸರು ನೂರಡಿ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರ ದಾಖಲಾತಿ ಪರಿಶೀಲನೆ ಮಾಡುತ್ತಿದ್ದರು.
ಸ್ಕೂಟಿಯಲ್ಲಿ ಬಂದ ಯುವತಿಯನ್ನ ಕೂಡ ತಡೆದು ದಾಖಲಾತಿ ಪರಿಶೀಲನೆ ಮಾಡಿದರು. ಈ ವೇಳೆ ನನ್ನ ಸ್ಕೂಟರ್ ಅನ್ನ ಯಾಕ್ ಮುಟ್ಟುತ್ತಿದ್ದೀರಾ?, ಅಲ್ಲದೆ ಸ್ಕೂಟರ್ ಮೇಲೆ ಕುಳಿತು ನನ್ನ ಗಾಡಿ ಯಾಕೆ ಕೊಡ್ಲಿ ಎಂದು ಅವಾಜ್ ಹಾಕಿದ್ದಾಳೆ.
ಈ ವೇಳೆ ಮಹಿಳಾ ಪಿಎಸ್ ಐ ಸ್ಕೂಟರ್ ನಿಂದ ಇಳಿಯಮ್ಮ, ನಿನ್ನ ಹೆಸರೇನು..? ನಿಮ್ಮ ತಂದೆಯನ್ನು ಠಾಣೆಗೆ ಕರೆಸು, ನೀನು ಬಾ ಎಂದು ಕರೆದರು. ಆಗ ಯುವತಿ ಹೇ ನನ್ನ ತಂದೆ ಇಲ್ಲ.. ಎಲ್ಲರನ್ನು ಕರೆಸಲಾಗಲ್ಲ.. ಎಂದು ರಂಪಾಟ ಮಾಡಿದ್ದಾಳೆ. ಪರಿಣಾಮ ತಾಳ್ಮೆ ಕಳೆದುಕೊಂಡ ಸವಿತಾ ಗೌಡ, ನನ್ನನ್ನೇ ಹೇ ಅಂತೀಯಾ. ಲೋಫರ್… ಏನ್ ಮಾತಾಡ್ತೀಯಾ ಎಂದು ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಅಗಿದ್ದು, ಯಾರು ತಪ್ಪು ಯಾರು ಸರಿ ನೀವೆ ಹೇಳಿ..! ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸದ್ದು ಮಾಡುತ್ತಿದೆ.
More Stories
MANDYA | ಅಭಿಮಾನಿ ಆಸೆಯಂತೆ ಅಂತೀಮ ದರ್ಶನ ಪಡೆದ ಮಾಜಿ ಸಿ.ಎಂ.ಸಿದ್ದರಾಮಯ್ಯ.