July 25, 2021

ವರ್ಷದ ನಂತರ ಅಭಿಮಾನಿಗಳ ಮುಂದೆ ದರ್ಶನ: ಹಾವೇರಿಯಲ್ಲಿ ದೂಳೆಬ್ಬಿಸುತ್ತಿರುವ ರಾಬರ್ಟ್ ರುದ್ರನರ್ತನ.

ಹಾವೇರಿ- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನೆಮಾಕ್ಕೆ ಹಾವೇರಿಯಲ್ಲಿ ದೂಳೆಬ್ಬಿಸುತ್ತಿದೆ. ಹಾವೇರಿಯ ಮಾಗಾವಿ ಥಿಯೇಟರ್‌ನಲ್ಲಿ ರಿಲೀಸ್ ಆಗಿರುವ ರಾಬರ್ಟ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ರಾಬರ್ಟ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳು ರಾತ್ರಿಯಿಂದಲೆ ಕ್ಯೂ ನಿಂತು ಟಿಕೆಟ್ ತೆಗೆದುಕೊಂಡಿದ್ದಾರೆ. ಚಿತ್ರ ಆರಂಭಕ್ಕೂ ಮುನ್ನ ಚಿತ್ರಮಂದಿರದ‌ ಮುಂದೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿ ಹುಚ್ಚೆದ್ದು ಕುಣಿದರು.

ಚಿತ್ರಮಂದಿರದ ಆವರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ದೊಡ್ಡ ಕಟೌಟ್ ನಿಲ್ಲಿಸಿಲಾಗಿದೆ. ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು, ಡಿ ಬಾಸ್ ಪರ ಘೋಷಣೆ ಜೋರಾಗಿತು. ಥಿಯೇಟರ್ ಮುಂದೆ ಅಭಿಮಾನಿಗಳ ಕವನ ಹಾಡು ನೃತ್ಯ ಜೈಕಾರ ಹಾಕುವುದು ಜೋರಾಗಿದೆ.

ಕೊರೋನಾ ಹಾವಳಿಯಿಂದ ಒಂದು ವರ್ಷ ಚಿತ್ರರಂಗ ಸೇರಿದಂತೆ ಥಿಯೇಟರ್ ಗಳು ಬಂದ್ ಆಗಿದ್ದವು. ಇದೀಗ ವರ್ಷದ ನಂತರ ಥಿಯೇಟರ್ ಗಳು ಪ್ರಾರಂಭವಾಗಿವೆ. ಅದರಲ್ಲೂ ಬಾಕ್ಸ್ ಆಪೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನರವರ ರಾಬರ್ಟ್ ಸಿನಿಮಾ ಬಿಡುಗಡೆಗೊಂಡಿರುವುದು ಅಭಿಮಾನಿಗಳನ್ನ ಹುಚ್ಚೆಬ್ಬಿಸುವಂತೆ ಮಾಡಿದೆ. ರಾಬರ್ಟ್ ಬಂದಿದ್ದು ಚಿತ್ರಪ್ರೇಮಿಗಳಿಗೆ ಖುಷಿಯಾಗಿರುವುದಂತೂ ನಿಜಾ..

ಆಲ್ ದ ಬೆಸ್ಟ್ ರಾಬರ್ಟ್..

Share this News
error: Content is protected !!