April 22, 2021

ಕಾಣೆಯಾಗಿದ್ದ 11 ವರ್ಷದ ಬಾಲಕ ಕೊಲೆಯಾಗಿರುವ ಶಂಕೆ..(?) ಪೊಲೀಸರಿಂದ ಆರೋಪಿಗಳ ಹುಡುಕಾಟ

ಹಾವೇರಿ – ಮಾರ್ಚ್ 7 ರಂದು ಮನೆಯಿಂದ ಕಾಣೆಯಾಗಿದ್ದ ಹನ್ನೊಂದು ವರ್ಷದ ಬಾಲಕ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಹಾವೇರಿ ನಗರದ ಅಶ್ವಿನಿನಗರದ ನಿವಾಸಿಯಾಗಿದ್ದ ತೇಜಸ್ ಗೌಡ ಮಲ್ಲಿಕೇರಿ ಎಂಬಾತ ಕೊಲೆ ಆಗಿದ್ದಾನೆ ಎನ್ನಲಾಗಿದೆ. ಯಾರೋ ಬಾಲಕನನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಶಂಕೆ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿಜಯಕುಮಾರ ಹಾಗೂ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಬಾಲಕನ ಕೊಲೆಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ‌. ಆರೋಪಿಗಳ ಪತ್ತೆಗಾಗಿ ಪೊಲೀಸರು ತಂಡಗಳನ್ನು ರಚನೆ ಮಾಡಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಆರೋಪಿಗಳ ಪತ್ತೆ ನಂತರ ಕೊಲೆ ನಡೆದಿದ್ದು ಯಾಕೆ? ಮತ್ತು ಕೊಲೆ ಮಾಡಿದವರು ಯಾರು? ಎಂಬ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಎಸ್ಪಿ ಕೆ.ಜಿ.ದೇವರಾಜು ಹೇಳಿದ್ದಾರೆ.

ಮಾರ್ಚ್ ೭ ರಂದು ತೇಜಸಗೌಡ ಮನೆಯಿಂದ ಆಟವಾಡಲು ಹೋದ ಬಾಲಕ ಮನೆಗೆ ವಾಪಸ್ಸು ಬಂದಿರಲಿಲ್ಲ. ಮಧ್ಯಾಹ್ನ ಮೂರುವರೆ ಗಂಟೆ ಸುಮಾರಿಗೆ ಮನೆಯಿಂದ ಹೋದ ಬಾಲಕ ಮರಳಿ ಬಾರದ ಹಿನ್ನೆಲೆಯಲ್ಲಿ ಪೋಷಕರು ಬಾಲಕ ಕಾಣೆಯಾಗಿದ್ದಾನೆ ಎಂದು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈಗ ಬಾಲಕನ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು. ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!