July 25, 2021

ಶಾಂತಂ ಪಾಪಂ ಸೀರಿಯಲ್ ನೋಡಿ ಪಾಪದ ಕೆಲಸಕ್ಕೆ ಕೈ ಹಾಕಿದ್ರು: ಮನೆಯಲ್ಲಿ ಮೊಬೈಲು ಬಿಟ್ಟು ಅಂದರ್ ಆದ್ರು..!

ಹಾವೇರಿ – ಟಿವಿಯಲ್ಲಿ ಬರುತ್ತಿದ್ದ ಸಿಐಡಿ, ಶಾಂತಂ ಪಾಪಂ ಎಂಬ ಕ್ರೈಂ ಸೀರಿಯಲ್ ನಿಂದ ಪ್ರೇರಣೆಗೊಂಡು ಹಣದಾಸೆಗೆ ಬಾಲಕನನ್ನು ಅಪಹರಿಸಿ ಕೊಲೆ ಮಾಡಿ‌ ಸುಟ್ಟು ಹಾಕಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಓರ್ವ ಬಾಲ ಆರೋಪಿ ಸೇರಿ ಇಬ್ಬರನ್ನು ಹಾವೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನ ಇಂಜಿನೀಯರಿಂಗ್ ಕಾಲೇಜ್ ಪ್ರೊಪೆಸರ್ ಬಸಪ್ಪ ಮೇಟಿ ಪುತ್ರ ರಿತೇಶ ಮೇಟಿ (20 ವರ್ಷ) ಮತ್ತು ಓರ್ವ ಬಾಲಕ ಎಂದು ಗುರುತಿಸಲಾಗಿದೆ.

ಘಟನೆ ನಡೆದಿದ್ದು ಹೇಗೆ..?
ಮಾರ್ಚ್ 7 ರಂದು ವಕೀಲ ಜಗದೀಶ ಮಲ್ಲಿಕೇರಿ ಪುತ್ರ ತೇಜಸಗೌಡ ಮನೆಯಿಂದ ಆಟವಾಡಲು ಹೊರಗೆ ಹೋಗಿದ್ದ. ಮಧ್ಯಾಹ್ನ ಮೂರುವರೆ ಸುಮಾರಿಗೆ ತೇಜಸ್ ಗೌಡನನ್ನು ಅಪಹರಣ ಮಾಡಿ ಹಗ್ಗದಿಂದ ಕುತ್ತಿಗೆ ಬಿಗಿದು ಬಾಲಕನನ್ನ ಕೊಲೆ ಮಾಡಿದ್ದಾರೆ. ನಂತರ ನಗರದ ಹೊರವಲಯದ ಹೆಗ್ಗೇರಿ ಕೆರೆಗೆ ಎಸೆದು ಹೋಗಿದ್ದಾರೆ. ಆರೋಪಿಗಳು ನಾಲ್ಕು ದಿನಗಳ ನಂತರ ಮೃತದೇಹವನ್ನು ಕೆರೆಯಿಂದ ಹೊರತೆಗೆದು ಮನೆಯ ಹಿತ್ತಲದಲ್ಲಿ ಮೃತದೇಹ ಹೂತಿದ್ದರು.

ಬಾಲಕನ ಶವ ಸುಟ್ಟಿದ್ದು ಯಾಕೆ..?
ಶವ ಹೊತಿಟ್ಟಿದ್ದ ಜಾಗದಲ್ಲಿ ವಾಸನೆ ಬರಲು ಶುರುವಾಗಿದೆ. ಇದರಿಂದ ಗಾಬರಿಗೊಂಡ ಆರೋಪಿಗಳು, ಮಧ್ಯರಾತ್ರಿ ಯಲ್ಲಿ ಹೂತಿದ್ದ ಶವವನ್ನು ಹೊರತೆಗೆದು ಮನೆಯ ಬಳಿ ಇರುವ ಖಾಲಿ ಜಾಗೆಯಲ್ಲಿ ಸುಟ್ಟು ಹಾಕಿ ಪರಾರಿಯಾಗಿದ್ದರು.

ಕಿಡ್ನ್ಯಾಪ್ ಗೆ ಪ್ರೇರಣೆ ಟಿವಿ ಸೀರಿಯಲ್
ಪಿಯುಸಿ ಪೇಲ್ ಆಗಿದ್ದ ರಿತೇಶ ಟಿವಿಯಲ್ಲಿ ಬರುತ್ತಿದ್ದ ಸಿಐಡಿ, ಶಾಂತಂ ಪಾಪಂ ಎಂಬ ಕ್ರೈಂ ಸೀರಿಯಲ್ ನಿಂದ ಪ್ರೇರಣೆಗೊಂಡು ಹಣದಾಸೆಗೆ ಬಾಲಕನನ್ನ ಅಪಹರಿಸಿ ಕೃತ್ಯವನ್ನ ಎಸಗಿದ್ದಾರೆ ಎನ್ನಲಾಗಿದೆ. ಬಂಧಿತ ಆರೋಪಿಯಿಂದ ಕಾರು ಕೃತ್ಯಕ್ಕೆ ಬಳಿಸಿದ ವಸ್ತುಗಳನ್ನ ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌.

ಆರೋಪಿಗಳ ಬಗ್ಗೆ ಸುಳಿವುಸಿಕ್ಕಿದ್ದು ಹೇಗೆ..?

ಮಾರ್ಚ್ 7ರಂದು ಬಾಲಕ ಕಾಣೆಯಾಗಿದ್ದಾನೆ ಅಂತಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತೆ. ಪ್ರಕರಣವನ್ನು ತನಿಖೆ ಮಾಡುವ ಹೊತ್ತಿಗೆ ಪ್ರೊಫೆಸರ್ ಒಬ್ರು ತಮ್ಮ ಮಕ್ಕಳು, ತಡರಾತ್ರಿ ಮನೆಗೆ ಬರುತ್ತಿದ್ದಾರೆ. ಅವರ ನಡುವಳಿಕೆಯಲ್ಲಿ ಬದಲಾವಣೆಯಾಗಿದೆ ಎಂದು ಪೋಲಿಸ್ ರಿಗೆ ಮಾಹಿತಿ ಕೊಡುತ್ತಾರೆ. ಪ್ರೊಫೆಸರ್ ಮಕ್ಕಳು ಮನೆಯಲ್ಲಿಯೇ ಸಿಮ್ ಮುರಿದು ಪೋನನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಇದರಿಂದ ಅನುಮಾನಗೊಂಡ ಪ್ರೊಫೆಸರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯನ್ನು ತಿಳಿದಕೊಂಡ ಪೋಲಿಸ್ ತಂಡ ತನಿಖೆ ಕೈಗೊಂಡು ಪ್ರೊಫೆಸರ್ ಮಕ್ಕಳ ಹಿಂದೆ ಬಿಳ್ಳುತ್ತಾರೆ.

ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾದ ಪೋಲಿಸರು..
ಎಸ್ಪಿ ಕೆ.ಜಿ.ದೇವರಾಜ್ , ಹೆಚ್ಚವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ‌ ಡಿಎಸ್ಪಿ ವಿಜಯಕುಮಾರ ಸಂತೋಷ ಮಾರ್ಗದರ್ಶನದಲ್ಲಿ ನಗರಠಾಣೆಯ ಸಿಪಿಐ ನೇತ್ರತ್ವದಲ್ಲಿ ಪ್ರಹ್ಲಾದ ಚನ್ನಗಿರಿ. ಪಿಎಸ್ಐ ಎಸ್.ಪಿ.ಹೊಸಮನಿ ಹಾಗೂ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ, ಕಿಡ್ನ್ಯಾಪ್ ಆ್ಯಂಡ್ ಮರ್ಡರ್ ಕೇಸ್ ಪ್ರಕರಣ ಬೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

______

Share this News
error: Content is protected !!