July 25, 2021

ವಿದ್ಯಾರ್ಥಿಗಳು ಸಮಯವನ್ನು ವಿದ್ಯಾರ್ಜನೆಗೆ ಬಳಸಿಕೊಳ್ಳಿ: ಜಿ.ಎಸ್. ಹತ್ತಿಮತ್ತೂರ

ಹಾವೇರಿ: ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ವಿದ್ಯಾರ್ಜನೆಗೆ ಬಳಸಿಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂದು ಶಿಕ್ಷಕ ಜಿ.ಎಸ್.ಹತ್ತಿಮತ್ತೂರ ಹೇಳಿದರು.

ತಾಲೂಕಿನ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಜರಗುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ತರಬೇತಿ ಕಾರ್ಯಗಾರದಲ್ಲಿ ಶುಕ್ರವಾರ ಘನಾಕೃತಿಗಳು ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಗಣಿತ ವಿಷಯದ ಪರೀಕ್ಷೆಯಲ್ಲಿ ಯಾವ ರೀತಿ ಅಂಕಗಳಿಸಲು ಸಹಾಯಕವಾಗುವ ಘಟಕಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ 10 ನೇ ತರಗತಿ ಬಹಳ ಅತ್ಯಂತ ಪ್ರಮುಖ ಘಟ್ಟವಾಗಿದ್ದು ಅದರಲ್ಲಿಯೂ ಬಹಳಷ್ಟು ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಅನುತ್ತೀರ್ಣರಾಗುತ್ತಾರೆ. ಕ್ರಮವಾಗಿ ನಿರಂತರ ಅಧ್ಯಯನ ಮಾಡಿದಾಗ ಮಾತ್ರ ಗಣಿತ ವಿಷಯದಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ ಎಂದರು.

ಗ್ರಾಮದ ಯೋಗಿವೇಮನ ಪ್ರೌಢ ಶಾಲೆ ಹಾಗೂ ಎಸ್.ಜೆ.ಎಫ್ ಎಸ್. ಪ್ರೌಢ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕಳೆದ 15 ದಿನಗಳಿಂದ ಶ್ರೀಮಠದಲ್ಲಿ ಕಾರ್ಯಗಾರ ಜರಗುತ್ತಿದೆ.

Share this News
error: Content is protected !!