April 22, 2021

ಮೃತಪಟ್ಟ ಗೆಳೆಯನ ಸ್ಮರಣಾರ್ಥ ಅವಿಸ್ಮರಣೀಯ ಕಾರ್ಯ ಮಾಡಿದ ಗೆಳೆಯರು..!

ಹಾವೇರಿ – ಗೆಳೆಯನ ಮರಣದ ದುಃಖದಲ್ಲಿದ್ದ ಗ್ರಾಮದ ಯುವಕರು ಗೆಳೆಯನ ನೆನಪಿನಲ್ಲಿ ರಕ್ತದಾನ ಮಾಡುವ ಮೂಲಕ ಸ್ನೇಹಕ್ಕೆ ಹೊಸ ಅರ್ಥ ನೀಡಿದ್ದಾರೆ. ಹಾವೇರಿ ತಾಲ್ಲೂಕು ಮರೋಳ ಗ್ರಾಮದಲ್ಲಿ ಗೆಳೆಯನ ಪ್ರಥಮ ವರ್ಷದ ಪುಣ್ಯ ಸ್ಮರಣಾರ್ಥ ಜೀವದಾನದ ರಕ್ತದಾನ ಶಿಬಿರ ನಡೆಸಿ ಅರ್ಥಪೂರ್ಣ ಕಾರ್ಯಕ್ರಮ ಮಾಡಿದ್ದಾರೆ.

ಸ್ನೇಹಜೀವಿ ಗೆಳೆಯರ ಬಳಗ ,ಸರ್ಕಾರಿ ಪ್ರೌಢಶಾಲೆಯ ಮರೋಳ ಹಾಗೂ ಸ್ನೇಹಮೈತ್ರಿ ಬ್ಲಡ್ ಆರ್ಮಿ ಅಕ್ಕಿಆಲೂರು ಸಂಯುಕ್ತ ಆಶ್ರಯದಲ್ಲಿ ನಡೆದ ಅರ್ಥಪೂರ್ಣ ರಕ್ತದಾನ ಶಿಬಿರವನ್ನು 35 ಬಾರಿ ರಕ್ತದಾನ ಮಾಡಿದ ರಕ್ತದಾನಿ ಶ್ರೀ ವಿಜಯಕುಮಾರ್ ದೇವರಗುಂಡಿಮಠ ಉದ್ಘಾಟಿಸಿದರು. ಈ‌ ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಗ್ರಾಮದ ಗೆಳೆಯರು ಹಾಗೂ ಯುವಕರು ಸೇರಿ ಒಟ್ಟು 61 ಜನರು ರಕ್ತದಾನ ಮಾಡಿದರು.

ಕಳೆದ ವರ್ಷ ಕಣ್ಮರೆಯಾದ ಗೆಳೆಯ ಮಾರುತಿ ಹೆಗ್ಗಪ್ಪನವರ ಗೌರವಾರ್ಥ ಮರೋಳ ಗ್ರಾಮದಲ್ಲಿ ರಕ್ತದಾನದ ಮಾಡುವ ಜೀವದಾನ ಹಬ್ಬ ಏರ್ಪಡಿಸಿದ್ದರು. ಗೆಳೆಯ ಮಾರುತಿ ಹೆಸ್ಕಾಂ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ. ವಿದ್ಯುತ್ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ವರ್ಶಿಸಿ ಮೃತಪಟ್ಟಿದ್ದ.

ಕಾರ್ಯಕ್ರಮ ಉದ್ಘಾಟಿಸಿದ ರಕ್ತದಾನಿ ವಿಜಯಕುಮಾರ ಸ್ವತಃ 35 ನೇ ಬಾರಿ ಜೀವದಾನ ಮಾಡಿದ್ದು ಯುವಕರಿಗೆ ಪ್ರೇರಣೆ ನೀಡಿದರು. 43 ಜನರು ಮೊದಲ ಬಾರಿ ರಕ್ತದಾನ ನೀಡಿ ರಕ್ತದಾನಿಗಳಾದರು.

ಗೆಳೆಯನ ಅಗಲಿಕೆಯನ್ನು ಗೆಳೆಯರು ರಕ್ತದಾನ ಮಾಡುವ ಮೂಲಕ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಗ್ರಾಮದ ಯುವರು ಹಿರಿಯರು ಶಿಬಿರದಲ್ಲಿ ಭಾಗವಹಿಸಿದ್ದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!