ಬಿಸಿ ಸುದ್ದಿ
October 18, 2021

ಸೋನು ಸೌಮ್ಯ ಆತ್ಮಹತ್ಯೆ: ಇಲ್ಲಿದೆ ಆತ್ಮಹತ್ಯೆ ಪ್ರಕರಣದ ಫುಲ್‌ ಡಿಟೇಲ್ಸ್..!

ಸುಂದರ ಕವಿತೆಗಳ ಮೂಲಕ ಫೇಸ್‌ಬುಕ್‌ ಬಳಕೆದಾರರ ಮೆಚ್ಚುಗೆಗೆ ಪಾತ್ರರಾಗಿದ್ದ ಸೋನು ಸೌಮ್ಯರವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ರೆಕಾರ್ಡ್‌ ಮಾಡಿದ್ದ ವಿಡಿಯೋ ಮತ್ತು ಅವರು ಬರೆದಿದ್ದು ಎನ್ನಲಾದ ಡೆತ್‌ನೋಟ್‌ ವೈರಲ್‌ ಆಗಿದೆ. ಸೌಮ್ಯರವರ ಸಾವಿಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಸಂತಾಪ, ಆಕ್ರೋಶ ವ್ಯಕ್ತವಾಗಿದೆ.

ಡೆತ್‌ನೋಟ್‌ ಮತ್ತು ವಿಡಿಯೋದಲ್ಲಿ ಏನಿದೆ..?

ಸೋನು ಸೌಮ್ಯರವರು ಬರೆದಿದ್ದರು ಎನ್ನಲಾದ ಡೆತ್‌ನೋಟ್‌ ಸಾಮಾಜಿಕ ತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಪತ್ರದ ಸಾರಾಂಶ ಹೀಗಿದೆ.
“ಎಲ್ಲರೂ ಕ್ಷಮಿಸಿ. ನಾನು ಮಾಡಿದ ಒಂದೇ ಒಂದು ತಪ್ಪೆಂದರೆ ಆತನನ್ನು ಪ್ರೀತಿಸಿದ್ದು. ಅದನ್ನು ಬಿಟ್ಟು ಬೇರೇನೂ ಮಾಡಿಲ್ಲ. ನಿಮಗೆಲ್ಲರಿಗೂ ಆತನ ಮಾತಿನ ಮೇಲಿರುವ ನಂಬಿಕೆ ನನ್ನ ಮೇಲಿಲ್ಲ. ತಪ್ಪಿತಸ್ಥಳಾಗಿ ಬದುಕುವ ಯಾವ ಆಸೆಯೂ ನನಗಿಲ್ಲ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಮಾಮನಿಗೆ ಮೋಸ ಮಾಡಬೇಕೆಂಬ ಯೋಚನೆ ನನಗಿರಲಿಲ್ಲ. ತಪ್ಪು ಎಂದು ತಿಳಿದಕೂಡಲೇ ನಾನು ತಿದ್ದಿಕೊಂಡೆ. ನಾನು ಸತ್ತರೆ ಆ ಸಾವಿಗೆ ಕಾರಣ ಅಣ್ಣಪ್ಪ ಮೇಟಿಗೌಡ ಒಬ್ಬನೇ. ಪಾಪು, ಈ ಅಮ್ಮನನ್ನು ಕ್ಷಮಿಸು. ನಾನು ನಿನ್ನನ್ನು ಅರ್ಧಕ್ಕೇ ಬಿಟ್ಟುಹೋಗುತ್ತಿದ್ದೇನೆ. ಎಲ್ಲರಿಗೂ ಕ್ಷಮೆ ಕೇಳುವೆ”
ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲೂ ಸೌಮ್ಯರವರು ಇದೇ ವಿಷಯವನ್ನು ಚಿಕ್ಕದಾಗಿ ಹೇಳಿದ್ದಾರೆ.

ಯಾರು ಈ ಅಣ್ಣಪ್ಪ ಮೇಟಿಗೌಡ?

ʻಬೆಳಕುʼ ಎಂಬ ಟ್ರಸ್ಟ್‌ ಮೂಲಕ ಫೇಮಸ್‌ ಆಗಿದ್ದ ಅಣ್ಣಪ್ಪ ಮೇಟಿಗೌಡ ಎಂಬುವವರು, ಟ್ರಸ್ಟ್‌ ಮೂಲಕ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದರು. ಕವಿತೆಗಳನ್ನು ಬರೆಯುವವರನ್ನು ಟ್ರಸ್ಟ್‌ ಪ್ರೋತ್ಸಾಹಿಸುತ್ತಿತ್ತು. ಸೋನು ಸೌಮ್ಯರವರು ಕೂಡ ಕವಯತ್ರಿಯಾಗಿದ್ದರಿಂದ ಇಬ್ಬರ ನಡುವೆ ಪರಿಚಯ ಉಂಟಾಗಿತ್ತು. ನಂತರದ ದಿನಗಳಲ್ಲಿ ಪರಿಚಯವು ಪ್ರೇಮಕ್ಕೆ ತಿರುಗಿತ್ತು ಎಂಬ ಮಾತು ಸಾಮಾಜಿಕ ತಾಣಗಳಲ್ಲಿ ಕೇಳಿಬರುತ್ತಿದೆ. ಸೌಮ್ಯರವರ ಸಾವಿಗೆ ನಿಜವಾದ ಕಾರಣ ಏನೆಂದು ತನಿಖೆಯಿಂದ ತಿಳಿದುಬರಬೇಕಿದೆ.

Share this News
error: Content is protected !!