ಬ್ಯಾಡಗಿ: ಡೀಪೊ ಮ್ಯಾನೆಜರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾಲಕ ಕಂ ನಿರ್ವಾಹಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಬಸ್ ಡೀಪೊದಲ್ಲಿ ಘಟನೆ ನಡೆದಿರುವಂತದ್ದು.
ಮನೋಜಕುಮಾರ ದಾನಪ್ಪನವರ (44ವರ್ಷ) ದಾವಣಗೆರೆಯ ರಾಮಗೊಂಡನಹಳ್ಳಿ ನಿವಾಸಿಯಾಗಿದ್ದು, ಬ್ಯಾಡಗಿ ಪಟ್ಟಣದ ಡಿಪೋದಲ್ಲಿ ಚಾಲಕ ಕಂ, ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ.
ಇಂದು ಬೆಳಿಗ್ಗೆ 9.25 ಕ್ಕೆ ಬ್ಯಾಡಗಿ ಬಸ್ ಡೀಪೊದಲ್ಲಿ ಮ್ಯಾನೇಜರ ಜೊತೆಗೆ ವಾಗ್ವಾದ ಮಾಡುತ್ತ ವಿಷ ಸೇವನೆ ಮಾಡಿದ್ದಾನೆ.
ತಕ್ಷಣ ಬ್ಯಾಡಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ಕಾರಣವೇನು..?
ಕಾಸಂಬಿ ಗ್ರಾಮಕ್ಕೆ ಲಾಕಡೌನ್ ಗಿಂತಲೂ ಮುಂಚೆ ವಸ್ತಿ ಬಸ್ ಓಡಿಸಲಾಗುತ್ತಿತ್ತು. ಲಾಕ್ ಡೌನ್ ನಂತರ ಬಸ್ ವಸ್ತಿಯಾಗುವುದು ನಿಂತಿತ್ತು. ಸಹಜವಾಗಿ ಕಾಸಂಬಿ ಗ್ರಾಮಸ್ಥರು ವಸ್ತಿ ಬಸ್ ಓಡಿಸುವಂತೆ ಮ್ಯಾನೆಜರ್ ಗೆ ಕೇಳಿದ್ದಾರೆ ಎನ್ನಲಾಗಿದೆ.
ಇದರಿಂದ ಕೋಪಗೊಂಡ ಡೀಪೊ ಮ್ಯಾನೆಜರ್ ಮನೋಜಕುಮಾರ ಮೇಲೆ ಸಂಸ್ಥೆಯ ನೌಕರನಾಗಿ ಚಾಡಿ ಹೇಳಿದಿಯಾ ಎಂದು ಅಮಾನತು ಆದೇಶ ಜಾರಿಮಾಡಿದ್ದಾರೆ. ಸುಮಾರು 16ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮನೋಜಕುಮಾರ, ಅಮಾನತು ಆದೇಶ ದಿಂದ ಮನನೊಂದು ವಿಷ ಸೇವಿಸಿದ್ದಾರೆ.
More Stories
ರಸ್ತೆ ಪಕ್ಕದಲ್ಲಿ ನಿಂತಿದ್ದವರ ಮೇಲೆ ಹರಿದ ಕಾರು: ಪತಿ ಸ್ಥಳದಲ್ಲೆ ಸಾವು, ಪತ್ನಿ ಮತ್ತು ಮಗುವಿಗೆ ಗಾಯ. ಬ್ಯಾಡಗಿ ತಾ| ಕದಮನಹಳ್ಳಿ ಕ್ರಾಸನಲ್ಲಿ ಘಟನೆ..!
ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕಿ..!?
ಮನೆ ಬಾಗಿಲು ಮುರಿದು ೬ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು..!