July 25, 2021

ಡಬಲ್ ಮರ್ಡರ್ ಗೆ ಬೆಚ್ಚಿಬಿದ್ದ ಹಾವೇರಿ…!

ಹಾವೇರಿ- ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ ಸಮೀಪದ ಯತ್ತಿನಹಳ್ಳಿ ಗ್ರಾಮದಲ್ಲಿ ನಡೆದಿದೆ. 28ವರ್ಷದ ನಿಂಗಪ್ಪ ಶಿರಗುಪ್ಪಿ, ಮತ್ತು ‌13 ವರ್ಷದ ಗಣೇಶ ಕುಂದಾಪುರ ಕೊಲೆಯಾದ ದುರ್ದೈವಿಗಳು.

ಯತ್ತಿನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಕಾಂಪ್ಲೇಕ್ಸನಲ್ಲಿ ಹತ್ಯೆ ಮಾಡಲಾಗಿದೆ. ರಾತ್ರಿ‌ ಮಲಗಿರುವಾಗ ಯಾವುದೋ ಹರಿತವಾದ ಆಯಧದಿಂದ ಹೊಡೆದು ಇಬ್ಬರನ್ನು ಕೊಲೆ ಮಾಡಲಾಗಿದೆ.

ಸ್ಥಳಕ್ಕೆ ಹೆಚ್ಚುವರಿ ಎಸ್ಪಿ,ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿಜಯಕುಮಾರ, ಸಿಪಿಐ ಪ್ರಹ್ಲಾದ ಚನ್ನಗಿರಿ, ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಯಾರು? ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನುವುದು ತನಿಖೆಯ ನಂತರ ತಿಳಿದು ಬರಬೇಕಾಗಿದೆ. ಒಟ್ಟಿನಲ್ಲಿ ಬೆಳ್ ಬೆಳಿಗ್ಗೆ ಹಾವೇರಿ‌‌ ಮಂದಿ ಡಬಲ್ ಮರ್ಡರ್ ಗೆ ಬೆಚ್ಚಿಬಿದ್ದಿದ್ದಾರೆ.

Share this News
error: Content is protected !!