ಹಾವೇರಿ – ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಹಾವೇರಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಸೈಕಲ್ ಗೆ ಸಿಲಿಂಡರ್ ಕಟ್ಟಿ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಬೀದಿಯಲ್ಲಿ ಸೈಕಲ್ ಮೇಲೆ ಸಿಲಿಂಡರ್ ಕಟ್ಟಿ ಪ್ರತಿಭಟನೆ ಮೆರವಣಿಗೆ ನಡೆಸಿದರು. ಈ ವೇಳೆ ಪ್ರತಿಭಟನಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಜನತೆಯ ಮೇಲೆ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳದಿಂದಾಗಿ ಸಾರಿಗೆ ವೆಚ್ಚ ಹೆಚ್ಚಳವಾಗುವ ಮೂಲಕ ಎಲ್ಲ ಅಗತ್ಯ ವಸ್ತುಗಳ ದರ ಗಗನಕ್ಕೇರುತ್ತಿರುವುದು ಜನತೆ ಸಂಕಷ್ಟವನ್ನ ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಬೆಲೆ ನಿಯಂತ್ರಣ ಮಾಡಬೇಕು .ಇಲ್ಲಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜೆ.ಡಿ.ಎಸ್ ಪಕ್ಷದಿಂದ ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಸುಂಕದ, ಕೆ.ಎಸ್.ಸಿದ್ದಬಸಪ್ಪ ಯಾದವ, ಎಸ್.ಎಸ್.ಕಳ್ಳಿಮನಿ, ಎಸ್.ಎಲ್. ಕಾಡದೇವರಮಠ, ಸೈಯದ ಜಮಾದಾರ, ಸುನೀಲ ದಂಡೆಮ್ಮನವರ, ಅಮೀರಜಾನ ಬೇಪಾರಿ, ಮಾಂತೇಶ ಬೇವಿನಹಿಂಡಿ, ಮಲ್ಲಿಕಾರ್ಜುನ ಅರಳಿ, ಖಾಲಿ ಅಲಿ ಪಟೇಲ, ಖಲೀಲಅಹ್ಮದ ಹುಲಗೇರಿ, ಐ.ಮಕಾನದಾರ, ಮಂಜುರಿ ಅಹ್ಮದ ಆಲೂರ, ಮುತ್ತಯ್ಯ ಚಿನ್ನಿಕಟ್ಟಿ, ಐ.ಹುಬ್ಬಳ್ಳಿ, ರಜಾಕ ಕೊಕ್ಕರಗುಂದಿ, ಮೆಹಬೂಬಜಮಾದಾರ, ಚನ್ನಬಸಪ್ಪ ತಳವಾರ ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.
More Stories
ಭಗವಂತನನ್ನು ಸಾಕ್ಷತ್ಕಾರ ಮಾಡಿಕೊಳ್ಳವ ಸಾಧನವೇ ಲಿಂಗದೀಕ್ಷೆ – ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತರುವುದಕ್ಕಾಗಿ ಹನಿಟ್ರ್ಯಾಪ್ ನಡೆದಿರುವ ಸಾಧ್ಯತೆ, ಎಲ್ಲ ಅಯಾಮಗಳಿಂದ ತನಿಖೆ. -ಬಸವರಾಜ್ ಬೊಮ್ಮಾಯಿ
ತವರು ಮನೆಗೆ ಬಂದಿದ್ದ ಅಜ್ಜಿಗೆ, ಯಮನ ರೂಪದಲ್ಲಿ ಕಾಡಿದ ಮನೆಯ ಮೇಲ್ಚಾವಣಿ.