April 22, 2021

ಮಹಾರಾಷ್ಟ್ರ ಗಡಿಯವರೆಗೆ ಕನ್ನಡದ ಧ್ವಜ ಶಾಲು ಹಾಕಿಕೊಂಡು ಹೋಗುತ್ತೇವೆ, ಹೊಡೆಯಲಿ ನೋಡೊಣ: ಕರವೇ ಪ್ರವೀಣ ಶೆಟ್ಟಿ ಚಾಲೆಂಜ್..!

ಹಾವೇರಿ- ಎಂಇಎಸ್ ಮತ್ತು ಶಿವಸೇನೆ ಕರ್ನಾಟಕದ ಧ್ವಜ ಶಾಲು ನೋಡಿದರೇ ಹೊಡೆಯುತ್ತೇವೆ ಎಂಬ ಹೇಳಿಕೆಯನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಮಹಾರಾಷ್ಟ್ರ ಗಡಿಯವರೆಗೆ ನಾವು ಕನ್ನಡದ ಧ್ವಜ ಶಾಲು ಹಾಕಿಕೊಂಡು ಹೋಗುವದಾಗಿ ಕರವೇ ಪ್ರವೀಣಶೆಟ್ಟಿ ಬಣದ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ಶಿವಸೇನೆ ಮತ್ತು ಎಂಇಎಸ್ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಹೋರಟಿವೆ. ಆದರೆ ಇದಕ್ಕೆ ಯಾವುದೇ ಕಾರಣಕ್ಕೂ ಕರವೇ ಅವಕಾಶ ನೀಡಲ್ಲ ಬದಲಿಗೆ ಮುಂಬೈಯನ್ನ ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಆಗ್ರಹಿಸಿದರು.

ನಮ್ಮನಾಳುವ ಸರ್ಕಾರಗಳು, ಜನಪ್ರತಿನಿಧಿಗಳು ಇದಕ್ಕೆ ಶಾಶ್ವತ ಪರಿಹಾರ ನೋಡಬೇಕಿತ್ತು. ಆದರೆ ಅವರು ನಿರ್ಲಕ್ಷ್ಯದೋರಣೆ ತಾಳಿದ್ದಾರೆ ಎಂದು ಈ ವೇಳೆ ಕಿಡಿಕಾರಿದರು. ಹುಚ್ಚ ಉದ್ಬವ ಠಾಕ್ರೆಯ ಸಂವಿಧಾನಬದ್ದ ಅಧಿಕಾರವನ್ನು ವಜಾಗೊಳಿಸಬೇಕು. ಎರಡು ರಾಜ್ಯಗಳ ನಡುವೆ ಪರಸ್ಪರ ಸಾಮರಸ್ಯ ಇರಬೇಕು. ಅದನ್ನು ಬಿಟ್ಟು ಪಾಕ್ ಭಾರತ ತರ ನೋಡುತ್ತಿರುವ ಉದ್ಬವ್ ಠಾಕ್ರೆಗೆ ನೀಡಿರುವ ಬೆಂಬಲವನ್ನು ಕಾಂಗ್ರೇಸ್ ವಾಪಸ್ ಪಡೆಯುವಂತೆ ಪ್ರವೀಣಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಆಗ್ರಹಿಸಿದರು.

 

_____

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!