April 22, 2021

ನೀನಂದ್ರೆ ನನಗಿಷ್ಟ: ಪ್ರೊಫೆಸರನಿಂದ ಅತ್ಯಾಚಾರ, ದೂರು ದಾಖಲಿಸಿದ ಕಾಲೇಜು ವಿದ್ಯಾರ್ಥಿನಿ..!

ಹಾವೇರಿ – ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲ್ಲೂಕು ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಮೂರನೇ ವರ್ಷದ ಬಿ.ಎಸ್.ಸಿ ಅಗ್ರೀ‌‌ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಸಹಪ್ರಾದ್ಯಾಪಕ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಅತ್ಯಾಚಾರ ಆರೋಪಿಯನ್ನು
ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಪಕರಾದ ಡಾ. ನೂರ್ ನವಾಜ್ ಎ.ಎಸ್ ಎಂದು ಗುರುತಿಸಲಾಗಿದೆ.

ಕಳೆದ ಮೂರು ವರ್ಷಗಳ ಹಿಂದಿನ ಬ್ಯಾಚ್ ನ ವಿದ್ಯಾರ್ಥಿನಿಗೆ ನೀನೆಂದರೆ ನನಗೆ ಇಷ್ಟಾ, ನೀನು ನನಗೆ ಲೈಂಗಿಕವಾಗಿ ಸಹಕರಿಸಿ ನನ್ನ ಆಸೆ ಈಡೆರಿಸಿದರೆ ನನ್ನ ಸಬ್ಜೆಕ್ಟನಲ್ಲಿ ನಿನ್ನನ್ನು ಫೇಲ್ ಮಾಡುತ್ತೇನೆ. ನಿನಗೆ ಕಡಿಮೆ ಅಂಕಗಳನ್ನು ನೀಡುತ್ತೇನೆ ಎಂದು ಹೆದರಿಸಿ ತನ್ನ ಛೇಂಬರಿನಲ್ಲಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.

ಅಲ‌್ಲದೇ ಲಾಕ್‍ಡೌನ್ ಸಮಯದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕಳಿಸದೇ ಬಲವಂತದಿಂದ ಹಾವೇರಿಯ ವಿದ್ಯಾನಗರದ ಒಂದು ಮನೆಯಲ್ಲಿ ಕರೆದುಕೊಂಡು ಹೋಗಿ
ಇಟ್ಟುಕೊಂಡು ಹೊರಗೆ ಬಿಡದಂತೆ ನಿರಂತರ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ. ಯಾರಿಗಾದರೂ ಹೇಳಿದರೆ ನಿನ್ನ ಪೇಲ್ ಮಾಡುತ್ತೇನೆ ಅಲ್ಲದೇ ಜೀವ ತೆಗೆಯುತ್ತೇನೆ. ಅಂತಾ ಜೀವದ ಬೆದರಿಕೆ ಹಾಕುತ್ತಾ ಬಂದಿದ್ದಾರೆ ಎಂದು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!