April 22, 2021

ಡಬಲ್ ಮರ್ಡರ್ ಕೇಸ್: ಆರೋಪಿಗಳ ಬಂದನ, ಜೊತೆಗೆ ಇದ್ದಿದ್ದೆ ಬಾಲಕನಿಗೆ ಮುಳುವಾಯಿತೇ..!?

ಹಾವೇರಿ – ನಿನ್ನೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹಾವೇರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಕಾಂಪ್ಲೆಕ್ಸ್ ನಲ್ಲಿ ನಿಂಗಪ್ಪ ಶಿರಗುಪ್ಪಿ 28 ವರ್ಷ ಮತ್ತು ಗಣೇಶ ಕುಂದಾಪುರ 14 ವರ್ಷ ಹತ್ಯೆಯಾಗಿದ್ದರು.

ಹತ್ಯೆ ಮಾಡಿದ ಆರೋಪಿಗಳನ್ನು ಶಂಭುಲಿಂಗ ಪೋರಾಪುರ, ಮತ್ತು ಮಂಜುನಾಥ ಯರೆಶೀಮೆ ಎಂದು ಗುರುತಿಸಲಾಗಿದೆ. ಆರೋಪಿ ಶಂಭುಲಿಂಗ ಹಾಗೂ ಹತ್ಯೆಯಾದ ನಿಂಗಪ್ಪ ಸ್ನೇಹಿತನಾಗಿದ್ದರು. ನಿಂಗಪ್ಪನಿಗೆ ಕೊಟ್ಟಿದ್ದ 4 ಲಕ್ಷ ರೂಪಾಯಿ‌ ಹಣ ಮತ್ತು ಬೈಕ್, ಕಾರ ತೆಗೆದುಕೊಂಡು ವಾಪಸ್ ಕೊಡದೆ ಪದೇ ಪದೇ ನಮಗೆ ನಿಂಗಪ್ಪ ಬೆದರಿಕೆ ಹಾಕುತ್ತಿದ್ದ. ಕೊಲೆ ಬೆದರಿಕೆ ಹಾಕುತ್ತಿದ್ದರಿಂದ ರಾಡ್ ಮತ್ತು ಡಂಬಲ್ಸ್ ನಿಂದ ಹೊಡೆದು ನಾವೇ ನಿಂಗಪ್ಪನ ಹತ್ಯೆ ಮಾಡಿದ್ದೇವೆ‌ ಎಂದು ಪೋಲಿಸ್ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ.

ಎರಡು ಲಾರಿ ಇಟ್ಟುಕೊಂಡು ಶಂಭುಲಿಂಗ ಮರಳು ಸಾಗಾಣಿಕೆ ಹಾಗೂ ಇತರೆ ವ್ಯಾಪಾರ ವಹಿವಾಟು ಮಾಡುತ್ತಿದ್ದ. ಲಾರಿ ಚಾಲಕನಾಗಿದ್ದ ಮಂಜುನಾಥ‌ ಜೋಡಿ ಕೊಲೆಯಲ್ಲಿ ಭಾಗವಹಿಸಿದ್ದ.

ಕೊಲೆಯಾದ ನಿಂಗಪ್ಪ ಡಕಾಯಿತಿ ಮತ್ತು ಕೊಲೆ ಪ್ರಕರಣವೊಂದ್ರಲ್ಲಿ ಶಿಕ್ಷೆಗೆ ಒಳಗಾಗಿ ಕಳೆದೊಂದು ವರ್ಷದಿಂದ ಜಾಮೀನು ಮೇಲೆ ಹೊರಗಡೆ ಇದ್ದ ಎನ್ನಲಾಗಿದೆ.

ಜೊತೆಗೆ ಇದ್ದಿದ್ದೆ ಬಾಲಕನಿಗೆ ಮುಳುವಾಯಿತು..?

ಗಣೇಶ ಯಾವಾಗಲೂ ನಿಂಗಪ್ಪನ ಜೊತೆ ಇರುತ್ತಿದ್ದರಿಂದ ಕೊಲೆ ಬಗ್ಗೆ ಹೇಳಬಹುದೆಂದು ಗಣೇಶನನ್ನ ಹತ್ಯೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

______

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!