April 22, 2021

ವಜ್ರಕಾಯದ ಹೋರಿ ರಾಣೇಬೆನ್ನೂರು ಡಾನ್ ಅಸ್ತಂಗತ: ಈ ಹೋರಿಯ ವಿಶೇಷತೆ ಏನು ಗೊತ್ತಾ..?

ಹಾವೇರಿ – ರಾಣೇಬೆನ್ನೂರು ಹುಲಿ ಅನ್ನೋ ಹೋರಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ಬಹಳ ಫೇಮಸ್ ಆಗಿತು.ರಾಣೆಬೆನ್ನೂರು ಹುಲಿ ಹೋರಿ ಅನಾರೋಗ್ಯದಿಂದ ಮೃತಪಟ್ಟು ಒಂದು ತಿಂಗಳಿಗೆ , ಈಗ ರಾಣೇಬೆನ್ನೂರು ಡಾನ್ ಹೋರಿಯೂ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆದಿದೆ. ಈಗ ಎರಡೂ ಹೋರಿ ಕಳೆದುಕೊಂಡ ನಗರದ ಕುರಬಗೇರಿ ನಿವಾಸಿ ದೆವ್ವ ಮರಿಯಪ್ಪ ಅನಾಥರಾಗಿದ್ದಾರೆ. ರಾಣೆಬೆನ್ನೂರು ಡಾನ್’ ಎಂಬ ಹೋರಿ ಕಲ್ಲು ಎಳೆಯುವ ಸ್ವರ್ದೆಯಲ್ಲಿ ಬಹಳ ಪ್ರಸಿದ್ದಿ ಪಡೆದ ಹೋರಿಯಾಗಿದೆ. ಇವತ್ತು ರಾಣೇಬೆನ್ನೂರು ಡಾನಗ ಹೋರಿ ಮೃತಪಟ್ಟಿದೆ.

ಈ ಹೋರಿ ಸುಮಾರು 10 ವರ್ಷದಿಂದ ವಿವಿಧ ಕಡೆ ನಡೆಯುವ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿತ್ತು. ಹಾವೇರಿ ಸೇರಿದಂತೆ ರಾಣೆಬೆನ್ನೂರು ನಗರದಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ ಈ ಹೋರಿ ಸುಮಾರು ಹತ್ತರಿಂದ ಇಪ್ಪತ್ತು ಕ್ವಿಂಟಾಲ್ ತೂಕದ ಕಲ್ಲು ಎಳೆಯುವ ಮೂಲಕ ಹೆಸರು ಮಾಡಿತ್ತು. ಆದರೆ ಇದೀಗ ಈ ಹೋರಿಯೂ ಮೃತಪಟ್ಟಿದ್ದು, ದೆವ್ವ ಮರಿಯಪ್ಪ ಕಂಗಾಲಾಗಿದ್ದಾರೆ.

ಕಳೆದ 15 ದಿನಗಳ ಹಿಂದೆ ಹೆಂಡತಿ ಸಹ ಅನಾರೋಗ್ಯದಿಂದ ‌ಮೃತಪಟ್ಟಿದ್ದಾಳೆ. ರಾಣೇಬೆನ್ನೂರು ಹುಲಿ ಮತ್ತು ರಾಣೇಬೆನ್ನೂರು ಡಾನ್ ಹೆಸರಿನ ಹೋರಿಗಳನ್ನು ಕಳೆದುಕೊಂಡ ದೆವ್ವ ಮರಿಯಪ್ಪ ಅಕ್ಷರಶಃ ಅನಾಥನಾಗಿದ್ದಾನೆ.

 

ದೆವ್ವ ಮರಿಯಪ್ಪ ಪ್ರೀತಿಯಿಂದ ಎರಡು ಹೋರಿಗಳನ್ನು ಸಾಕಿದ್ದರು. ಇವು ವಿವಿಧ ಸ್ಪರ್ಧೆಯ ಮೂಲಕ ರಾಜ್ಯಾದ್ಯಂತ ದೆವ್ವ ಮರಿಯಪ್ಪರ ಹೋರಿಗಳು ಎಂದು ಹೆಸರುವಾಸಿಯಾಗಿದ್ದವು. ಈಗ ಈ ಹೋರಿಗಳು ಸೇರಿದಂತೆ ಪತ್ನಿಯನ್ನು ಕಳೆದುಕೊಂಡು ದೆವ್ವ ಮರಿಯಪ್ಪ ಅನಾಥರಾಗಿದ್ದಾರೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!