June 22, 2021

HAVERI | ಕುರುಬ ಜನಾಂಗಕ್ಕೆ ಎಸ್ಟಿ ಮೀಸಲಾತಿ ಪಾದಯಾತ್ರೆ ಯಶಸ್ವಿ ಹಿನ್ನೆಲೆ ದೇವರ ಸನ್ನದಿಗೆ ವಿಶೇಷ ಪೂಜೆ

 

ಹಾವೇರಿ – ಕಳೆದ ಜನವರಿ 15 ರಂದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಕಾಗಿನೆಲೆಯ ಕನಕ ಗುರುಪೀಠದಿಂದ ಎಸ್ಟಿ ಮೀಸಲಾತಿ ಪಾದಯಾತ್ರೆಯನ್ನ ಕಾಗಿನೆಲೆಯ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತ್ರತ್ವದಲ್ಲಿ ಸಾವಿರಾರು ಕುರುಬರು ಸಮುದಾಯದ ನಾಯಕರು ಹಾಗೂ ಸಮುದಾಯದ ಜನರು ಪಾದಯಾತ್ರೆಯನ್ನ ಯಶಸ್ವಿಗೊಳಿಸಿದ್ದಾರೆ.

ಪೆಬ್ರವರಿ 07 ವರೆಗೆ ನಡೆದ ಐತಿಹಾಸಿಕ ಕುರುಬರ ಎಸ್ಟಿ ಹೋರಾಟದ ಪಾದಯಾತ್ರೆಯು ಯಾವುದೇ ವಿಘ್ನಗಳು ಇಲ್ಲದೆ ನಿರ್ವಿಘ್ನವಾಗಿ ನಡೆಸಿಕೊಟ್ಟ ಜಗದ್ಗುರು ಶ್ರೀ ರೇವಣಸಿದ್ದೇಶ್ವರ, ಶ್ರೀ ಬೀರಲಿಂಗೇಶ್ವರ, ಶ್ರೀ ಮೈಲಾರಲಿಂಗಶ್ವರ, ಜಗನ್ಮಾತೆ ಶ್ರೀ ಮಹಾಸಿದ್ದೇಶ್ವರಿ,ಸಂತ ಶ್ರೇಷ್ಠ ಕನಕದಾಸರ ಹಾಗೂ ಬ್ರಹ್ಮಲೀನ ಜಗದ್ಗುರು ಶ್ರೀ ಬೀರೇಂದ್ರ ಕೇಶವ ತಾರಕಾನಂದ ಪುರಿ ಮಹಾಸ್ವಾಮೀಜಿಯವರ ಸನ್ನಿಧಿಗೆ ಪೂಜೆ ಸಲ್ಲಿಸಿದರು. ಎಲ್ಲಾ ಪರಮ ಪೂಜ್ಯರುಗಳು ಪೂಜೆ ಸಲ್ಲಿಸಿದರು.

­

________

Share this News
error: Content is protected !!