April 22, 2021

ದುಶ್ಮನ್ ಬಗಲ್ ಮೇ ಹೈ: ಕುಚಿಕೂ ಗೆಳೆಯನೇ ಕುತ್ತಿಗೆಗೆ ತಂದುಬಿಟ್ಟಿದ್ದಾ..!?

ಹಾವೇರಿ- ಅವರಿಬ್ಬರೂ ಕುಚಿಕು ಗೆಳೆಯರು. ಮೆನಸಿಣಕಾಯಿ ವ್ಯಾಪಾರ ಮಾಡಿಕೊಂಡಿದ್ದರು. ಅದರಲ್ಲೊಬ್ಬ ತಾನು ಏನೇ ಮಾಡಿದ್ದರೂ ತನ್ನ ಗೆಳೆಯನಿಗೆ ಹೇಳಿಯೆ ಮಾಡ್ತಿದ್ದ. ಪ್ರತಿನಿತ್ಯ ಗೆಳೆಯನ ಮನೆಯಲ್ಲೇ ಬೈಕ್ ಇಟ್ಟು ವ್ಯಾಪಾರಕ್ಕೆ ಹೋಗ್ತಿದ್ದ. ವ್ಯಾಪಾರದಿಂದ ಬಂದು ಏಳೂವರೆ ಲಕ್ಷ ನಗದು ಹಣದ ಸಮೇತ ಬೈಕ್‌ ನಲ್ಲಿ ಮನೆಗೆ ಹೋಗ್ತಿದ್ದ. ಗೆಳೆಯನ ಮೇಲೆ ವಿಶ್ವಾಸವಿಟ್ಟು ಎಲ್ಲ ಹೇಳ್ತಿದ್ದ ಅವನಿಗೇ ಗೊತ್ತಿಲ್ದಂತೆ ಗ್ಯಾಂಗ್ ಒಂದರಿಂದ ಸುಲಿಗೆ ಮಾಡಿಸಿದ್ದ.

ಮೆಣಸಿನಕಾಯಿ ವ್ಯಾಪಾರಸ್ಥ ಜಮೀನಲ್ ಅಹ್ಮದ ಪಟೇಲ್. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ನಿವಾಸಿ. ಸುಮಾರು ವರ್ಷಗಳಿಂದ ಮೆನಸಿಣಕಾಯಿ ವ್ಯಾಪಾರ ಮಾಡಿಕೊಂಡಿದ್ದಾನೆ. ಜಮೀನಲ್‌ ಅಹಮ್ಮದ ಜೊತೆಗೆ ಆತನ‌ ಕುಚಿಕು ಗೆಳೆಯ ಹಾವೇರಿ ಜಿಲ್ಲೆ ಶಿಗ್ಗಾಂವಿ ನಗರದ ನಿಮ್ತಿಯಾಜ್ ಚೌದರಿ ಎಂಬಾತ ಹತ್ತಿ ವ್ಯಾಪಾರ ಮಾಡಿಕೊಂಡಿದ್ದ.

ಅದು ಫೆಬ್ರುವರಿ 27 ಸಮಯ ರಾತ್ರಿ ಒಂಬತ್ತು ಗಂಟೆ ಐವತ್ತು ನಿಮಿಷ. ಜಮೀನಲ್ ಅಹಮ್ಮದ ವ್ಯಾಪಾರ ಮುಗಿಸಿ ಏಳೂವರೆ ಲಕ್ಷ ರುಪಾಯಿ ಹಣ ಇಟ್ಕೊಂಡು ಬೈಕ್ ಮೇಲೆ ಮನೆಗೆ ಹೋಗ್ತಿದ್ದ. ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡಿರೋ ಬಿಸನಳ್ಳಿ ಗ್ರಾಮದ ಬಳಿ ಸರ್ವೀಸ್ ರಸ್ತೆಯಲ್ಲಿ ಹೋಗ್ತಿದ್ದ ಜಮೀನಲ್ ಅಹಮ್ಮದಗೆ ಹಿಂದಿನಿಂದ ಯಾರೋ ತಲೆ, ಮೈ, ಕೈಗೆ ಹೊಡೆದಿದ್ರು. ನಂತರ ಹಣವಿದ್ದ ಬ್ಯಾಗ್ ಕಿತ್ತುಕೊಂಡು ಹೋಗಿದರು.

ಬೈಕನಲ್ಲಿ ಬರ್ತಿದ್ದ ಜಮೀನಲ್‌ ಅಹಮ್ಮದ ತಲೆಗೆ ಹೊಡೆದು ಏಳೂವರೆ ಲಕ್ಷ ರುಪಾಯಿ ಸುಲಿಗೆ ಮಾಡಿಕೊಂಡು ಹೋಗಿದ್ದ ಕುರಿತು ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡು ಶಿಗ್ಗಾಂವಿ ಸಿಪಿಐ ಬಸವರಾಜ ಹಲಬನ್ನವರ ನೇತೃತ್ವದಲ್ಲಿ ತನಿಖೆಗೆ ಇಳಿದಿದ್ದ ಬಂಕಾಪುರ ಪಿಎಸ್ಐ ಸಂತೋಷ ಪಾಟೀಲ ನೇತೃತ್ವದ ಪೊಲೀಸರ ತಂಡ ಒಟ್ಟು ಏಳು ಜನ ಆರೋಪಿಗಳನ್ನ ಪೊಲೀಸ್ ಠಾಣೆಗೆ ಎಳೆದು ತಂದು ವಿಚಾರಣೆ ನಡೆಸಿತು.

ಆಗ ಪೊಲೀಸರೆ ಒಂದು ಕ್ಷಣ ಆಶ್ಚರ್ಯಗೊಂಡಿದರು ಯಾಕಂದ್ರೆ ಹಲ್ಲೆಗೆ ಒಳಗಾಗಿ‌ ಹಣ ಕಳೆದುಕೊಂಡಿದ್ದ ಜಮೀನಲ್ ಅಹಮ್ಮದನ ಅಪ್ತ ಗೆಳೆಯನ ಹಣ ಸುಲಿಗೆ ಮಾಡಿಸಿದ್ದ. ಜಮೀನಲ್‌ ಅಹಮ್ಮದನ ಕುಚಿಕು ಗೆಳೆಯ ಇಮ್ತಿಯಾಜ್ ಚೌಧರಿ ಗೆಳೆಯ ವ್ಯಾಪಾರದಿಂದ ಬಂದಿರೋ ಹಣದ ಬಗ್ಗೆ ಪ್ರತಿದಿನ ಮಾಹಿತಿ ಕೊಟ್ಟು ಹೋಗ್ತಿದ್ದ. ಪ್ರತಿದಿನ ವ್ಯಾಪಾರದಿಂದ ಮನೆಗೆ ಒಯ್ತಿರುವ ಹಣದ ಮಾಹಿತಿ ನೀಡಿಯೇ ಹೋಗ್ತಿದ್ದ. ಆದ್ರೆ ಇಮ್ತಿಯಾಜ್ ಮಾತ್ರ ಗೆಳೆಯನ ಪಾಲಿಗೆ ಮಿತ್ರದ್ರೋಹಿ ಆಗಿದ್ದಾ. ಜಮೀನಲ್ ಅಹಮ್ಮದ ಹಣ ಒಯ್ಯುವಾಗ ಸುಲಿಗೆ ಮಾಡುವಂತೆ ಆರು ಜನರಿಗೆ ಕೆಲಸ ಒಪ್ಪಿಸಿರುತ್ತಾನೆ. ಅದರಂತೆ ಅವರು ಆತನ ಮೇಲೆ ಹಲ್ಲೆ ಮಾಡಿ ಹಣ ದರೋಡೆ ಮಾಡಿಕೊಂಡು ಹೋಗಿರುತ್ತಾರೆ.

ಬಂಧಿತರನ್ನ ಜಮೀನಲ್‌ ಅಹಮ್ಮದನ ಕುಚಿಕು ಗೆಳೆಯ ಇಮ್ತಿಯಾಜ್ ಅಹಮ್ಮದ, ಅಫ್ತಾಬ ಬಾಗವಾನ, ಹಜರತ್ ಅಲಿ ಹುಬ್ಬಳ್ಳಿ, ಹಜರೆಸಾಬ ಹುಬ್ಬಳ್ಳಿ, ಮುಸ್ತಾಕ ಅಹಮ್ಮದ ಪರಸಾಪುರ, ಮಹ್ಮದಜಾಫರ ಮಲ್ಲಂಗನವರ ಮತ್ತು ಅಸ್ಲಂ ಪಾಳೇದ ಅಂತಾ ಗುರುತಿಸಲಾಗಿದೆ. ಕುಚಿಕು ಗೆಳೆಯ ಅಂತಾ ವ್ಯಾಪಾರದಿಂದ ಬಂದ ಹಣದ ಬಗ್ಗೆ ಮಾಹಿತಿ ನೀಡಿ ಮನೆಗೆ ಹೋಗ್ತಿದ್ದವನಿಗೆ ಸುಲಿಗೆಕೋರರ ಮೂಲಕ ಗೆಳೆಯನ ಹಣ ಲಪಟಾಯಿಸಿದ್ದ. ಆದ್ರೆ ಮಿತ್ರದ್ರೋಹದ ಕೆಲಸ‌ ಬಹಳ ದಿನ ಗುಟ್ಟಾಗಿ ಉಳಿಯಲಿಲ್ಲ. ಈಗ ಬಂಕಾಪುರ ಪೊಲೀಸರು ಏಳು ಜನರ ಹೆಡೆಮುರಿ ಕಟ್ಟಿದ್ದು, ಏಳೂ ಜನರನ್ನ ಜೈಲಿಗೆ ಅಟ್ಟಿದ್ದಾರೆ.
____

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!