July 25, 2021

ರೈತರ ಮಹಾ ಪಂಚಾಯತ್ ಗೆ ಕ್ಷಣ ಗಣನೆ: ರೈತರ ಬೃಹತ್ ಜಾಥಾ ಪ್ರಾರಂಭ..!

ರೈತರ ಮಹಾ ಪಂಚಾಯತ್ ಗೆ ಕ್ಷಣ ಗಣನೆ.

ಹಾವೇರಿ- ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನ ವಿರೋಧಿಸಿ ಹಾವೇರಿಯಲ್ಲಿ ರೈತರ ಮಹಾ ಪಂಚಾಯತ್ ಸಮಾವೇಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈಗಾಗಲೇ ನಗರದ ಜಾನುವಾರು ಮಾರುಕಟ್ಟೆಯಿಂದ ಸಮಾವೇಶದ ಸ್ಥಳದವರೆಗೆ ರೈತರ ಬೃಹತ್ ಜಾಥ್ ಪ್ರಾರಂಭವಾಗಿದೆ.

ಜಾಥಾದಲ್ಲಿ ಜಿಲ್ಲೆಯ ಸಾವಿರಾರು ರೈತರು , ಹಸಿರು ಭಾವುಟ ಹಿಡಿದು ಜಾಥಾ ದಲ್ಲಿ ಭಾಗವಹಿಸಿದ್ದಾರೆ.‌ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ರಾಷ್ಟ್ರೀಯ ನಾಯಕರಾದ ರಾಕೇಶ ಟಿಕಾಯತ್, ಡಾ.ದರ್ಶನ್ ಪಾಲ್ ಮತ್ತು ಯುದ್ವೀರ ಸಿಂಗ್ ಸೇರಿದಂತೆ ರಾಜ್ಯ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಎರಡು ಗಂಟೆಗೆ ನೇರವಾಗಿ ರೈತ ನಾಯಕರು ಸಭೆಗೆ ಆಗಮಿಸಿ ಸಮಾವೇಶ ಪ್ರಾರ‌ಂಭವಾಗಲಿದೆ.

Share this News
error: Content is protected !!