April 22, 2021

ಶ್ರೀ ಮೈಲಾರಲಿಂಗೇಶ್ವರನ ಸನ್ನಿದಿಯಲ್ಲಿ ಅಚ್ಚರಿ: ಉದ್ಬವ ಲಿಂಗದ ಪವಾಡಕ್ಕೆ ಇದೆಯಾ ಬೇರೆ ಕಾರಣ..!?

ಬಳ್ಳಾರಿ – ಐತಿಹಾಸಿಕ ಶ್ರೀಕ್ಷೇತ್ರದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕು ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.

ಮೈಲಾರಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಎಂದಿನಂತೆ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸುವ ವೇಳೆ, ಅಭಿಷೇಕದ ಜಲ ಇಂಗುವ ದೃಶ್ಯ ಕಂಡುಬಂದಿದೆ.

ಸಾಮನ್ಯವಾಗಿ ಅಭಿಷೇಕ ಮಾಡಿದ ಜಲವನ್ನು ಬಿಂದಿಗೆ ತುಂಬಿ ತೀರ್ಥ ರೂಪದಲ್ಲಿ ಬಳಸಲಾಗುತ್ತದೆ.‌ ದೇವಸ್ಥಾನ ಕ್ಕೆ ಬರುವ ಭಕ್ತಾದಿಗಳಿಗೆ ತೀರ್ಥ ವಾಗಿ ಹಂಚಲಾಗುತ್ತದೆ. ಆದರೆ ನಿನ್ನೆಯ ಘಟನೆಯಿಂದ ಆರ್ಚಕರು ಸೇರಿದಂತೆ ಭಕ್ತರಿಗೆ ಅಚ್ಚರಿಯಾಗಿದೆ.

ಮೈಲಾರ ಲಿಂಗನ ಉದ್ಬವ ಲಿಂಗದ ಪಕ್ಕದಲ್ಲಿ ಬೀಳುವ ಅಭಿಷೇಕದ ನೀರು, ಗುಳ್ಳೆಗಳು ಬಂದು ಭೂಮಿಯಲ್ಲಿ ಇಂಗುತ್ತಿದೆ.‌ ಇದು ಇದೇ ಮೊದಲು ಬಾರಿಗೆ ನಡೆದಿದ್ದಾ? ಅಥವಾ ಇದರಕ್ಕಿಂತಲೂ ಮುಂಚೆ ಈ ತರಹದ ಘಟನೆಗಳು ನಡೆದಿದ್ವಾ? ಅನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಜೊತೆಗೆ ಈಗ ಸಾಮಾನ್ಯವಾಗಿ ಬೇಸಿಗೆ ಇರುವುದರಿಂದ ಭೂಮಿಯಲ್ಲಿ ಅಭಿಷೇಕದ ಜಲ ಇಂಗಿರುವುದಕ್ಕೆ ವೈಜ್ಞಾನಿಕವಾಗಿ ಕಾರಣಗಳು ಇರಬಹುದು ಎನ್ನುವುದನ್ನು ಕೂಡ ತಳ್ಳಿಹಾಕುವಂತಿಲ್ಲ.

ಏನೇ ಇರಲಿ ಈಗ ಮೈಲಾರ ಲಿಂಗ ಸ್ವಾಮಿಯ ಸನ್ನಿಧಿಯಲ್ಲಿ ನಡೆದ ಈ ಘಟನೆ, ಭಕ್ತರಲ್ಲಿ ರೋಮಾಂಚನದ ಜೊತೆಗೆ ಅಚ್ಚರಿಯನ್ನು ಉಂಟುಮಾಡಿದೆ. ಅಭಿಷೇಕದ ಜಲ ಇಂಗುತ್ತಿರುವ ದೃಶ್ಯದ ವಿಡಿಯೋ ಈಗ ವೈರಲ್ ಆಗಿದೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!