July 25, 2021

ನೀರು ಹಾಯಿಸಲು ‌ಹೋದಾಗ ಚಿರತೆ ಅಟ್ಯಾಕ್: ಜೀವ ಉಳಿಸಿಕೊಳ್ಳಲು ಚಿರತೆಯನ್ನೆ ಕೊಂದ ರೈತರು..!

ಹಾವೇರಿ – ಜಮೀನಿಗೆ ನೀರು ಹಾಯಿಸಲು ತೆರಳಿದ್ದ ರೈತರ ಮೇಲೆ ಚಿರತೆ ದಾಳಿ ನಡೆಸಿದ್ದು, ಪ್ರಾಣ ರಕ್ಷಣೆಗಾಗಿ ಇಬ್ಬರು ರೈತರು ಚಿರತೆಯೊಂದಿಗೆ ಸೆಣಸಾಡಿ ಚಿರತೆ ಕೊಂದ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದ ಬಳಿ ನಡೆದಿದೆ.

ಓರ್ವ ರೈತ‌ನಿಗೆ ಗಂಭೀರ ಗಾಯ, ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗೊಂಡಿದ್ದು ಗಾಯಾಳುಗಳನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

ನಿನ್ನೆ ರಾತ್ರಿ ಗ್ರಾಮದ ಹೊರವಲಯದಲ್ಲಿ ಇರುವ ಜಮೀನಿಗೆ ನೀರು ಹಾಯಿಸಲು ಹೋಗಿದ್ದರು ಎನ್ನಲಾಗಿದೆ.‌ ಈ ವೇಳೆ ದಾಳಿ ಮಾಡಿರುವ ಚಿರತೆ ಇಬ್ಬರನ್ನು ಮಾರಣಾಂತಿಕವಾಗಿ ಗಾಯಗೊಳಿಸಿದೆ. ಜೀವ ಉಳಿಸಿಕೊಳ್ಳಲು ರೈತರು ಚಿರತೆಯನ್ನು ಕೊಂದು ಹಾಕಿದ್ದಾರೆ. ನಂತರ ಊರಿನವರು ಬಂದು ಗಾಯಗೊಂಡಿದ್ದ ರೈತರನ್ನು ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗದಿಗೆಪ್ಪ ಯಳವಳ್ಳಿ (45 ವರ್ಷ) ಎಂಬ ರೈತನಿಗೆ ಗಂಭೀರ ಗಾಯಗೊಂಡಿದ್ದಾನೆ.

ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

______

Share this News
error: Content is protected !!