July 25, 2021

ಸಾವಿನಲ್ಲೂ ಸಾರ್ಥಕತೆ ಮೆರೆದ ರಾಣೇಬೆನ್ನೂರಿನ ಯಮ್ಮಿ ಕುಟುಂಬ ಸದಸ್ಯರು..!

ಹಾವೇರಿ – ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಯಮ್ಮಿ ಕುಟುಂಬದ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮರೆದು ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.

ರಾಣೇಬೆನ್ನೂರು ನಗರದ ಶಬರಿ ಕಾಲೋನಿಯ ನಿವಾಸಿ
NWKSRTC ನಿವೃತ್ತ ಚಾಲಕ ಶಿವಾನಂದ ಗಣಪತೆಪ್ಪ ಯಮ್ಮಿ ಬೆಳಗ್ಗೆ ನಿಧನರಾಗಿದ್ದಾರೆ. ಇವತ್ತು ಕುಟುಂಬ ಸದಸ್ಯರು ಸಾವಿನ ದುಃಖದಲ್ಲೂ ತಂದೆ ಶಿವಾನಂದಪ್ಪನವರ ಎರಡು ಕಣ್ಣುಗಳನ್ನು ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಗೆ ದಾನ‌ಮಾಡಿದರು. ನೇತ್ರದಾನ ಮಾಡುವ ಮೂಲಕ ಇಬ್ಬರ ಜೀವನಕ್ಕೆ ಬೆಳಕು ನೀಡಿದ್ದಾರೆ.

ಅಕ್ಕಿಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗದ ಸಹಕಾರದೊಂದಿಗೆ ರಾಣೆಬೆನ್ನೂರಿನ ಡಾ. ಚಂದ್ರಶೇಖರ ಕೆಲಗಾರ ರವರು ನೇತ್ರಗಳನ್ನು ಸಂಗ್ರಹಿಸಿದರು. ಸಾವಿನಲ್ಲೂ ಸಾರ್ಥಕತೆ ಮರೆದ ಕುಟುಂಬಕ್ಕೆ ರಾಣೇಬೆನ್ನೂರು ನಗರದ ಜನತೆ ಹಾಗೂ ಅಪಾರ ಬಂದುಗಳು ಮೆಚ್ಚುಗೆ ವ್ಯಕ್ತಪಡಿಸಿದರು.
___

Share this News
error: Content is protected !!