July 25, 2021

ನಿದ್ದೆಗಣ್ಣಲ್ಲಿ ತಪ್ಪಿದ ನಿಯಂತ್ರಣ: ಸಂಪೂರ್ಣ ಸುಟ್ಟು ಕರಕಲಾದ ಇನ್ನೋವಾ ಕಾರು..!

ಹಾವೇರಿ- ಇನ್ನೋವಾ ಕಾರು ಪಲ್ಟಿಯಾಗಿ ಕಾರು‌ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ನಾಗನೂರು ಬ್ರಿಡ್ಜ್ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಘಟನೆ ನಡೆದಿದ್ದು ತಮಿಳುನಾಡಿನಿಂದ ಗೋವಾದತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಮೂವರು ಕಾರಿನಲ್ಲಿದ್ದ ಪಾರಾಗಿದ್ದಾರೆ. ಬೆಳಗಿನ ಜಾವದಲ್ಲಿ ಚಾಲಕ ನಿದ್ದೆಗೆ ಜಾರಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿದೆ.

ಕಾರಿನಲ್ಲಿದ್ದ ಮೂವರನ್ನ ಅಂಬ್ಯುಲನ್ಸ್ ಮೂಲಕ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ….

_____

Share this News
error: Content is protected !!