April 22, 2021

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು, ಓರ್ವನಿಗೆ ಗಾಯ..!

ಹಾವೇರಿ: ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕನಲ್ಲಿದ್ದ ಓರ್ವ ಮೃತಪಟ್ಟರೆ ಇನ್ನೂರ್ವ ಗಾಯಗೊಂಡಿರುವ ಘಟನೆ ತಾಲೂಕಿನ ನೆಗಳೂರ ಗ್ರಾಮದ ಗುತ್ತಲ ರಸ್ತೆಯಲ್ಲಿ ಗುರುವಾರ ರಾತ್ರಿ 8 ರ ಸುಮಾರಿಗೆ ನಡೆದಿದೆ.

ಮುದೆವಪ್ಪ ಸುಣಗಾರ(50) ಮೃತದುರ್ದೈವಿ. ರಾಜು ಕರಿಗಾರ(24) ಎಂಬುವವರು ಗಾಯಗೊಂಡಿದ್ದಾರೆ. ಇರ್ವರೂ ನೆಗಳೂರ ನಿವಾಸಿಗಳಾಗಿದ್ದು. ಇಬ್ಬರೂ ಗುತ್ತಲ ದಿಂದ ನೆಗಳೂರ ಗ್ರಾಮಕ್ಕೆ ರಾತ್ರಿ ಮರಳುವ ಸಂದರ್ಭದಲ್ಲಿ ಅಪರಿಚಿತವಾಹನವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಗಾಯಗೊಂಡ ರಾಜು ಕರಿಗಾರ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗುತ್ತಲ ಪೂಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುತ್ತಲ ಪೂಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

____________

ಕೆಲಸ ಹುಡುಕುತ್ತಿದ್ದಿರಾ..? ಹಾಗಾದರೆ ಈ ಕೆಳಗಿನ ಕಾಣುವ LATEST JOBS ಮೇಲೆ ಒತ್ತಿ..👇

LATEST JOBS

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!