July 25, 2021

ಸಂಬಳ ಬಾರದ್ದಕ್ಕೆ ಸಾರಿಗೆ ನೌಕರ ಆತ್ಮಹತ್ಯೆ: ವಾಯುವ್ಯ ಸಾರಿಗೆ ಡಿಸಿ ಏನಂದ್ರು ಗೊತ್ತಾ..!?

ಹಾವೇರಿ- ಸರಿಯಾಗಿ ಸಂಬಳ ಬಾರದ್ದಕ್ಕೆ(?) ಬೇಸತ್ತು ಚಾಲಕ‌ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಣಕೂರು ಗ್ರಾಮದಲ್ಲಿ ನಡೆದಿದೆ. ಮೃತ ಚಾಲಕನನ್ನು ಗೋಪಾಲರೆಡ್ಡಿ ಜಕ್ಕರೆಡ್ಡಿ 48 ವರ್ಷ ವಯಸ್ಸು ಎಂದು ಗುರುತಿಸಲಾಗಿದೆ.

ಕಳೆದ ೨೦ ವರ್ಷಗಳಿಂದ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಗೋಪಾಲರೆಡ್ಡಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಸಂಬಳ ಬಾರದ್ದಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

 

ಸಂಬಳ ಬಾರದ್ದಕ್ಕೆ ಕುಟುಂಬ ನಿರ್ವಹಣೆಗಾಗಿ ಚಾಲಕ ಅಲ್ಲಲ್ಲಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಇದರಿಂದ ಮನನೊಂದು ತನ್ನ ಜಮೀನಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಲಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಾಯವ್ಯ ಸಾರಿಗೆ ಡಿ.ಸಿ ಜಗದೀಶ್ ಸ್ಪಷ್ಟನೆ

ಈ ಪ್ರಕರಣದ ಬಗ್ಗೆ ‌ಮಾತಾನಾಡಿದ ವಾಯುವ್ಯ ಸಾರಿಗೆ ಡಿ.ಸಿ ಜಗದೀಶ್, ಗೋಪಾಲರೆಡ್ಡಿ ವಾಯವ್ಯ ಸಾರಿಗೆ ಸಂಸ್ಥೆಯು ಯಾವುದೇ ಸಂಬಳ ನಿಲ್ಲಿಸಿಲ್ಲ. ಎಲ್ಲಾ ತಿಂಗಳ ವೇತನ ನೀಡಿದ್ದೇವೆ. ಪ್ರತಿ ತಿಂಗಳು 16,230 ರೂ ಕಡಿತ ಆಗಿ ವೇತನ ನೀಡಲಾಗಿದೆ.

ಅದರಲ್ಲಿ ಎರಡು ಸಾವಿರ ಪಿಎಫ್ ಕಟ್ ಆಗುತ್ತಿದೆ. ಪಿಎಫ್ ಮೇಲೆ ಲೋನ್ ತೆಗೆದುಕೊಂಡಿದ್ದಾರೆ. ಅದಕ್ಕೆ ಎಳು ಸಾವಿರ ರೂಪಾಯಿಗಳು ಲೋನ್ ಕಟ್ ಆಗುತ್ತಿದೆ. ವಾಲೆಂಟರಿ ಪಿ.ಎಫ್. 2000 ಕಟ್ ಆಗುತ್ತಿದೆ. ಎಲ್‌ಐಸಿ 3000 ರುಪಾಯಿ ಕಟ್ ಆಗುತ್ತಿದೆ. ಯಾವುದೇ ಸಮಸ್ಯೆ ಇಲ್ಲ. ಯಾಕೆ ಈ ರೀತಿ ದೂರು ನೀಡಿದ್ದಾರೆ ಗೊತ್ತಿಲ್ಲ ಎಂದು‌ ಕೆ.ಎಸ್.ಆರ್.ಟಿ.ಸಿ ಡಿಸಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.

___
ನೀವು ನಿರುದ್ಯೋಗಿಗಳಾ..? ಕೆಲಸ ಹುಡುಕುತ್ತಿದ್ದಿರಾ..? ಬ್ಯಾಂಕ್, ಸೇನಾ ನೇಮಕಾತಿ, ಜಿಲ್ಲಾ ಪಂಚಾಯತ, ಅರಣ್ಯ ಇಲಾಖೆ, ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಮಗ್ರ ಮಾಹಿತಿಗಾಗಿ..

ಈ ಕೆಳಗಿನ JOB NEWS ಮೇಲೆ ಕ್ಲಿಕ್ ಮಾಡಿ..👇

JOB NEWS

Share this News
error: Content is protected !!