June 22, 2021

SAVANORU | ಮನೆ ಬೀಗ ಮುರಿದು ಕಳ್ಳರು ದೋಚಿದ್ದು ಏನು!?

ಸವಣೂರು – ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿ ಮನೆಯ ಬೀಗ ಮುರಿದು ಮೂರು ಲಕ್ಷ ರುಪಾಯಿ ಮೌಲ್ಯದ ಬಂಗಾರ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ‌.

ಸವಣೂರು ಪಟ್ಟಣದ ಎಸ್ ಎಮ್ ಕೃಷ್ಣ ನಗರದಲ್ಲಿ‌ರುವ ಹಣ್ಣಿನ ವ್ಯಾಪಾರಿಯಾಗಿರುವ ಅಸ್ಲಂ ರಶೀಧಖಾನ ಪಠಾಣ ರವರ ಮನೆಯಲ್ಲಿ‌ ಕಳ್ಳತನ ನಡೆದಿದೆ‌.ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ, ಮನೆಯ‌ ಮುಂದಿನ ಬಾಗಿಲಿನ ಇಂಟರ್ ಲಾಕ್ ಮೀಟಿರುವ ಕಳ್ಳರು, ಮನೆಯೊಳಗೆ ನುಗ್ಗಿ ಬೆಡ್ ರೂಮ್ ನಲ್ಲಿದ್ದ ಟ್ರಜರಿ ಹಾಗೂ ಕಪಾಟುಗಳನ್ನು‌ ಮುರಿದು ಅದರಲ್ಲಿದ್ದ ಎರಡುವರೆ ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು‌ ಒಂದುವರೆ ಲಕ್ಷ ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ಸವಣೂರು ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Share this News
error: Content is protected !!