July 25, 2021

ಉದ್ಯಮ ಕ್ಷೇತ್ರ ಎಲ್ಲೆಡೆ ಬೆಳೆದು ಬಂದಾಗ ಮಾತ್ರ ಅಭಿವೃದ್ಧಿ ಸಾಧ್ಯ- ವಿನಾಯಕ ಜೋಷಿ

ಹಾವೇರಿ- ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಕೃಷಿ ಚಟುವಟಿಕೆಯಷ್ಟೇ ಪ್ರಬಲವಾಗಿ ಉದ್ಯಮ ಕ್ಷೇತ್ರ ಎಲ್ಲೆಡೆ ಬೆಳೆದು ಬಂದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹ ನಿರ್ದೇಶಕ ವಿನಾಯಕ ಜೋಷಿ ಹೇಳಿದರು.

ಅವರು ನಗರದ ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗವು ಆಯೋಜಿಸಿದ್ದ ಕೈಗಾರಿಕೋದ್ಯಮದಲ್ಲಿನ ವಾಸ್ತವ ಪ್ರಗತಿ-ಸ್ಥಿತಿಗತಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಸುಮಾರು 10 ಮಧ್ಯಮ ಮತ್ತು ದೊಡ್ಡಮಟ್ಟದ ಕೈಗಾರಿಕೆಗಳು ಚಾಲನೆಯಲ್ಲಿದ್ದು ಸುಮಾರು 12000 ಕ್ಕೂ ಮಿಕ್ಕಿ ಸಣ್ಣ ಸಣ್ಣ ಕೈಗಾರಿಕೆಗಳು, ಚಟುವಕೆಗಳು ಚಾಲ್ತಿಯಲ್ಲಿವೆ. ಸರ್ಕಾರದಿಂದ ಅನುದಾನ, ಅನುಕೂಲ ಮತ್ತು ಸಹಾಯ ಕೇಂದ್ರಿತ ವ್ಯವಹಾರಿ ಕೈಗಾರಿಕೆಗಳನ್ನು ಸ್ಥಾಪಿಸುವಲ್ಲಿ ಇಂದಿನ ಯುವ ಜನಾಂಗ ಮುಂದಾಗಬೇಕಿದೆ. ಸರ್ಕಾರದಿಂದ ಉದ್ದಿಮೆ ಸ್ಥಾಪನೆಗೋಸ್ಕರ ಹಲವು ಯೋಜಿತ ಕಾರ್ಯಕ್ರಮಗಳು ಜಾರಿಯಲ್ಲಿವೆ. ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕಿದೆ. ಜಿಲ್ಲೆ ಹತ್ತು ಹಲವು ವೈಶಿಷ್ಠ್ಯಗಳಿಂದ ಕಂಗೊಳಿಸುತ್ತಿದೆ. ಕೃಷಿ, ಕೈಗಾರಿಕೆ, ಸಾಂಸ್ಕøತಿಕ, ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರಗಳನ್ನೇ ಮೊದಲ್ಗೊಂಡು ಹಲವಾರು ಕ್ಷೇತ್ರಗಳಲ್ಲಿ ಮುಂದಿದೆ. ತನ್ನದೇ ಆದ ಕೊಡುಗೆ ನೀಡುತ್ತಿರುವ ಹಾವೇರಿ ಜಿಲ್ಲೆಯಲ್ಲಿ ಬೇಕಾದಷ್ಟು ಜನ ಉದ್ಯಮಶೀಲರು ಇದ್ದು, ಕ್ಷೇತ್ರವನ್ನು ಇನ್ನಷ್ಟು ಮತ್ತಷ್ಟು ಉದ್ದಿಮೆಗಳನ್ನು ಸ್ಥಾಪಿಸುವುದರ ಮೂಲಕ ತಮ್ಮೊಟ್ಟಿಗೆ ಸಮೂಹವನ್ನು ಮುನ್ನಡೆಸುವ ಜವಾಬ್ದಾರಿಯಿದೆ ಎಂದರು.

Click ವಿವಿಧ ಹುದ್ದೆಗಳಿಗೆ ಸರಕಾರದಿಂದ ನೇಮಕಾತಿ ಆದೇಶ

ಪದವಿ ಪ್ರಾಚಾರ್ಯೆ ಡಾ. ಸಂಧ್ಯಾ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಜಿಲ್ಲಾದ್ಯಂತ ಉದ್ದಿಮೆಗಳ ಬಹಳ ಪ್ರಮಾಣದಲ್ಲಿ ಪ್ರಸಿದ್ಧಿ ಪಡೆದಿವೆ. ವಿದ್ಯಾರ್ಥಿಗಳು ಕೇವಲ ಪಠ್ಯ ಕೇಂದ್ರಿತ ಶಿಕ್ಷಣಕ್ಕೆ ಸೀಮಿತರಾಗದೇ, ಅನುಭವಾತ್ಮಕ ಶಿಕ್ಷಣಕ್ಕೂ ಆದ್ಯತೆ ನೀಡಿದಾಗ ಪ್ರಗತಿ ಸಾಧ್ಯವಾಗುವುದು. ವಾಣಿಜ್ಯ ವಿದ್ಯಾರ್ಥಿಗಳಾದವರು ಉದ್ದಿಮೆಗಳನ್ನು ಸ್ಥಾಪಿಸುವ, ಉದ್ಯೋಗ ದೊರಕಿಸುವ ಪ್ರಯತ್ನ ಮಾಡಬೇಕಿದೆ ಎಂದರು. ವಿಭಾಗದ ಮುಖ್ಯಸ್ಥ ಡಾ. ಎಮ್. ಬಿ. ಯಾದಗುಡೆ, ಪ್ರೊ. ಆರ್. ಬಿ. ಅಜರಡ್ಡಿ, ಎಮ್.ಕಾಂ. ಸಂಯೋಜಕ ಪ್ರೊ. ಜಿ. ಎಸ್. ಬಾರ್ಕಿ, ಪ್ರೊ. ಗುರುಪಾದಯ್ಯ ಸಾಲಿಮಠ, ಪ್ರೊ. ರಿಷಿಕಾ ಡಿ. ಪ್ರೊ. ಸುಮಾ ಹಿರೇಮಠ, ಪ್ರೊ. ಪವನ ಯು. ಡಿ., ಪ್ರೊ. ಡಿ. ಆರ್. ಸಂಗಮ, ಪ್ರೊ. ಸುಮಂಗಲಾ ಜಿ. ಎಮ್. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Share this News
error: Content is protected !!