July 25, 2021

ನಾನು ಡಿಕೆಶಿ ಮನೆ ಬಳಿಗೆ ಬಂದಿದ್ದೇನೆ: ಸಿಡಿ ಲೇಡಿಯದು ಎನ್ನಲಾದ ಆಡಿಯೋ ವೈರಲ್..!?

ಬೆಂಗಳೂರು : – ರಾಸಲೀಲೆ ಸಿಡಿ ಪ್ರಕರಣಕ್ಕೆ ಮತ್ತೊಂದು ತಿರುವು ಪಡೆದುಕೊಂಡಿದೆ. ಸಂತ್ರಸ್ತ ಯುವತಿ ತನ್ನ ಸಹೋದರನ ಜೊತೆಗೆ ಮಾತನಾಡಿರುವುದು ಎನ್ನಲಾದ? ಆಡಿಯೋ ಈಗ ಬಯಲಾಗಿದೆ. ಆಡಿಯೋದಲ್ಲಿ ತಾನು ಡಿಕೆಶಿ ಮನೆಯ ಬಳಿಗೆ ಬಂದಿದ್ದೇನೆ ಎಂದು ಹೇಳಿದ್ದಾಳೆ.

ರಾಸಲೀಲೆ ಸಿಡಿಯಲ್ಲಿರುವ ವಿಡಿಯೋದಲ್ಲಿರುವ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಯುವತಿ ತನ್ನ ಸಹೋದರನ ಜೊತೆಗೆ ಮಾತನಾಡಿರುವ ಆಡಿಯೋ ವೈರಲ್ ಮಾಡಲಾಗಿದೆ. ಆಡಿಯೋದಲ್ಲಿ ಯುವತಿ ಡಿ.ಕೆ.ಶಿವಕುಮಾರ್ ಹೆಸರನ್ನು ಪ್ರಸ್ತಾಪ ಮಾಡಿದ್ದಾಳೆ.

ಒಂದು ಕಡೆಯಿಂದ ಯುವತಿಯ ಸಹೋದರ ರಾಜಕೀಯದ ಸಹವಾಸವೇ ಬೇಡ ಎಂದು ಬುದ್ದಿ ಮಾತು ಹೇಳಿದ್ದಾನೆ. ಆದರೆ ವಿಡಿಯೋವನ್ನು ಗ್ರಾಫಿಕ್ಸ್ ಮಾಡಲಾಗಿದೆ. ಅದರಲ್ಲಿ ಇರೋದು ನಾನಲ್ಲ, ನನ್ನ ಧ್ವನಿಯನ್ನು ಮಾಡ್ಯುಲೇಷನ್ ಮಾಡಲಾಗಿದೆ ಎಂದು ಆ ಕಡೆಯಿಂದ ಲೇಡಿ(?) ಹೇಳಿದ್ದಾಳೆ.

Click ವಿವಿಧ ಹುದ್ದೆಗಳಿಗೆ ಸರಕಾರದಿಂದ ನೇಮಕಾತಿ ಆದೇಶ

ಸಂತ್ರಸ್ತ ಯುವತಿ ಮಾತನಾಡಿರೋ ಆಡಿಯೋ ಇದೀಗ ಇಡೀ ಪ್ರಕರಣಕ್ಕೆ ಸ್ಪೋಟಕ ತಿರುವು ನೀಡಿದೆ. ಪ್ರಕರಣದಲ್ಲಿ ತನ್ನ ವಿರುದ್ದ ಷಡ್ಯಂತ್ರ ನಡೆಯುತ್ತಿದೆ ಎಂದು ರಮೇಶ್ ಜಾರಕಿಹೊಳಿ ಆರೋಪವನ್ನು ಮಾಡುತ್ತಲೇ ಬಂದಿದ್ದಾರೆ. ಅದ್ರಲ್ಲೂ ಪ್ರಕರಣದಲ್ಲಿ ಮಹಾನಾಯಕನಿದ್ದಾನೆ ಅಂತಾನೂ ಹೇಳಿದ್ದರು. ಆ ಮಹಾನಾಯಕ ಯಾರು? ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

ವೈರಲ್ ಆಗಿರುವ ಆಡಿಯೋ ದ ಬಗ್ಗೆ ಸರಿಯಾದ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕಾಗಿದೆ. ಆಡಿಯೋ ದಲ್ಲಿರುವ ಧ್ವನಿ ನಿಜವಾಗಿಯೂ ಆ ಲೇಡಿಯದ್ದೆಯಾ? ಅನ್ನೊದು ಯಕ್ಷಪ್ರಶ್ನೆಯಾಗಿದೆ.

 

ಮುಂದೆ ಸಿಡಿ ಲೇಡಿ ಪ್ರಕರಣ ಯಾವ ಕಡೆ ತಿರುವು ಪಡೆದುಕೊಳ್ಳತ್ತದೆ ಅನ್ನೋದು ಕಾದು ನೋಡಬೇಕಿದೆ.

Share this News
error: Content is protected !!