July 25, 2021

ಹಲೋ.. ಕೌನ್ ಬನೇಗಾ ಕರೋಡಪತಿ: ಹುಷಾರು‌ ನಿಮಗೂ ಕಾಲ‌ ಮಾಡಬಹುದು..!

ಹಾವೇರಿ – ಹಾವೇರಿ ತಾಲ್ಲೂಕು ಸಂಗೂರು ಗ್ರಾಮದ ಸಕ್ಕರೆ ಕಾರ್ಖಾನೆಯ ನಿವೃತ್ತ ನೌಕರನಿಗೆ ಕೌನ್ ಬನೇಗಾ ಕರೋಡಪತಿ ನಿಮಗೆ 25 ಲಕ್ಷ ರುಪಾಯಿ ಬಹುಮಾನ ಸಿಕ್ಕಿದೆ ಅಂತಾ ಹೇಳಿ ಲಕ್ಷಾಂತರ ರುಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.

ವಿವಿಧ ಹುದ್ದೆಗಳಿಗೆ ಸರಕಾರದಿಂದ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ Click ಮಾಡಿ

ಸಂಗೂರು ಗ್ರಾಮದ ಚನ್ನವೀರಯ್ಯ ಹರಕುಣಿಮಠ ಎಂಬುವರಿಗೆ ಮಾರ್ಚ್ 24 ರಂದು ಕೌನ್ ಬನೇಗಾ ಕರೋಡಪತಿ ಹೆಡ್ ಆಫೀಸಿನ ಸಿಬ್ಬಂದಿ ಶರ್ಮ್ ಅಂತಾ ಪರಿಚಯ ಮಾಡಿಕೊಂಡು ನಿಮಗೆ 25 ಲಕ್ಷ ರುಪಾಯಿ ಬಹುಮಾನ ಬಂದಿದೆ. ಬಹುಮಾನದ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲು ಟ್ಯಾಕ್ಸ್ ಹಣ , ಸರ್ಮಿಸ್ ಚಾರ್ಜ್, ಜಿಎಸ್ ಟಿ ಟ್ಯಾಕ್ಸ್ ಕಟ್ಟಬೇಕು ಅಂತಾ ಹೇಳಿ ಶರ್ಮಾ ಸೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್‍ನ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ. 14,86,000 ಹಣವನ್ನು ಹಾಕಿಸಿಕೊಂಡು ಮೋಸ ಮಾಡಿದ್ದಾನೆ.

ಸದ್ಯ ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share this News
error: Content is protected !!