July 25, 2021

ಈಗ ಕಾಂಗ್ರೆಸ್ ಮಹಾನಾಯಕನದ್ದು ಹೊರಬಂದಿದೆ. ಕೆಲವೇ ದಿನಗಳಲ್ಲಿ ಬಿಜೆಪಿಯ ಯುವರಾಜನದ್ದು ಹೊರ ಬರಲಿದೆ.- ಬಸವನಗೌಡ ಪಾಟೀಲ ಯತ್ನಾಳ

ಹಾವೇರಿ- ಕಾಂಗ್ರೆಸ್ ನ ಮಹಾನಾಯಕ ಮತ್ತು ಬಿಜೆಪಿ ಯುವರಾಜರದ್ದು ಸಿಡಿ ಉತ್ಪನ್ನ ಮಾಡುವ ಎರಡು ಪ್ಯಾಕ್ಟರಿಗಳಿವೆ. ಇವತ್ತು ಹೆಸರು ಬಂದಿರುವ ಕಾಂಗ್ರೆಸ್ ಮಹಾ ನಾಯಕ ಇಂಥಹ ಸಿಡಿಗಳನ್ನ ಖರೀದಿ ಮಾಡ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಹಾಕಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ಮಾತನಾಡಿದ ಅವರು ಕೆಲವೊಂದು ಹೆಣ್ಣು ಮಕ್ಕಳನ್ನು ಬಿಟ್ಟು ಬ್ಲ್ಯಾಕ್ ಮೇಲ್ ಮಾಡಿ, ಸಿಡಿ ತಗೊಂತಾರೆ. ಒಂದು ವೇಳೆ ಸಪೋರ್ಟ್ ಮಾಡದಿದ್ರೆ, ತೊಂದ್ರೆ ಕೊಟ್ರೆ ಸಿಡಿ ಬಿಡ್ತೀನಿ ಅಂತಾ ಭಯಪಡಿಸುತ್ತಾರೆ. ಎಷ್ಟೋ ಜನ ಶಾಸಕರು ಈ ಭಯದ ವಾತಾವರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿದ್ದಾರೆ‌. ನಿನ್ನೆ ಸಿಡಿ ಯುವತಿ ಹೆಸರು ಹೇಳಿದಳಲ್ಲ. ಅವರ ಡ್ರೈವರ್ ನೆ ಅವರ ಜೊತೆ ಅಡ್ಡಾಡಿರೋ ಬಗ್ಗೆ ಚರ್ಚೆ ಆಗ್ತಿದೆಯಲ್ಲ ಎಂದು ಕಿಡಿ ಕಾರಿದರು.

ಈ ಬಗ್ಗೆ ನಾನು ಮೊದಲೆ ಭವಿಷ್ಯ ನುಡಿದಿದ್ದೆ‌.
ಬಿಜೆಪಿಯಲ್ಲೊಬ್ಬ ಯುವರಾಜ ಮತ್ತು ಕಾಂಗ್ರೆಸ್ ಮಹಾನಾಯಕ ಇಬ್ಬರೂ ಇದ್ದಾರೆಂದು ಹೇಳಿದ್ದೆ. ಈಗ ಕಾಂಗ್ರೆಸ್ ಮಹಾನಾಯಕನದ್ದು ಹೊರಬಂದಿದೆ.
ಕೆಲವೆ ದಿನಗಳಲ್ಲಿ ಬಿಜೆಪಿಯ ಯುವರಾಜನದ್ದು ಹೊರಬರಲಿದೆ. ಈ ಸಿಡಿ ಯುವರಾಜನ ರಕ್ಷಣೆ ಮಾಡಲು ಸಿಸಿಬಿಗೆ ಕೊಟ್ಟಿದ್ದು. ಸಿಬಿಐಗೆ ಕೊಟ್ಟರೆ ಎಲ್ಲ ಕಳ್ಳರನ್ನು ಒದ್ದು ಒಳಗೆ ಹಾಕ್ತಾರೆ. ಇಂಥಾ ಬಹಳ ಮಂದಿಯ ಸಿಡಿ ಮಾಡಿದ್ದಾರೆ. ಐಪಿಎಸ್, ಐಎಎಸ್ ಅಧಿಕಾರಿಗಳು, ವ್ಯಾಪಾರಸ್ಥರು, ಶಾಸಕರು, ಸಂಸದರ ಸಿಡಿಗಳಿವೆ. ಇವರಿಬ್ಬರೂ ಸಿಡಿ ಖರೀದಿದಾರರು. ಮೆಕ್ಕೆಜೋಳ, ಮೆಣಸಿನಕಾಯಿ ಖರೀದಿ ಮಾಡುವವರ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲೊಬ್ಬರು ಸಿಡಿ ಖರೀದಿ ಮಾಡೋರಿದ್ದಾರೆ.

ಬಿಜೆಪಿಯ ಉನ್ನತ ನಾಯಕನ ಸಿಡಿ ಕಾಂಗ್ರೆಸ್ ನ ಮಹಾನಾಯಕನ ಬಳಿ ಇದೆ. ಅವನನ್ನು ನೋಡಿದರೆ ಬಿಜೆಪಿ ನಾಯಕರು ಭಯಪಡುತ್ತಾರೆ. ಹಿಂದೆ ಆ ಮಹಾನಾಯಕನೆ ಸಿಡಿ ಇರುವ ಬಗ್ಗೆ ಹೇಳಿದ್ದಾನೆ ಎಂದು ಸಿಡಿ ಬಗ್ಗೆ ಬಸವನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಹಾಕಿದ್ದಾರೆ.

_______

Share this News
error: Content is protected !!